Wednesday, August 26, 2026

BDA Apartments

Home Crime ಮೂರು ಟಿಪ್ಪ‌ರ್ ಗಳು ವಶಕ್ಕೆ: 1.74 ಲಕ್ಷ  ರೂ. ದಂಡ.

ಮೂರು ಟಿಪ್ಪ‌ರ್ ಗಳು ವಶಕ್ಕೆ: 1.74 ಲಕ್ಷ  ರೂ. ದಂಡ.

ಗುಂಡ್ಲುಪೇಟೆ,ಜನವರಿ,15,2024(www.justkannada.in): ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು  ಪರ್ಮಿಟ್ ಇಲ್ಲದೆ ಸಂಚರಿಸುತ್ತಿದ್ದ ಮೂರು ಟಿಪ್ಪ‌ರ್ ಗಳನ್ನ ವಶಪಡಿಸಿಕೊಂಡು 1.74 ಲಕ್ಷ  ರೂ. ದಂಡ ವಿಧಿಸಿದ್ದಾರೆ.

ರಜಾ ದಿನವೂ ಕಾರ್ಯಚರಣೆಗಿಳಿದ ಡಿಡಿ ಪದ್ಮಾಜಾ ಅವರು ಅಕ್ರಮ ದಂಧೆಕೊರರಿಗೆ ಬಿಸಿ ಮುಟ್ಟಿಸಿದ್ದಾರೆ. ಗುಂಡ್ಲುಪೇಟೆ ಪರ್ಮಿಟ್ ಇಲ್ಲದೆ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಮೂರು ಟಿಪ್ಪರ್‌ ಗಳ ಮೇಲೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜಾ ಅವರು ದಾಳಿ ನಡೆಸಿದ್ದಾರೆ. ರಾಜಪ್ಪ, ಪ್ರಭಾಕರ್, ಸೆಲ್ವಕುಮಾರ್‌ ಗೆ ಸೇರಿದ ಮೂರು ಟಿಪ್ಪರ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಹಿರೀಕಾಟ ಬಳಿ ತಡೆದು ತಪಾಸಣೆ ನಡೆಸಿದಾಗ ಪರ್ಮಿಟ್ ವಂಚಿಸಿರುವುದು ಪತ್ತೆಯಾಗಿದ್ದು, ರಾಜಪ್ಪಗೆ ಸೇರಿದ ಟಿಪ್ಪರ್‌ ಗೆ 35,700ಸಾವಿರ, ಪ್ರಭಾಕರ್, ಸೆಲ್ವಕುಮಾರ್ ಸೇರಿದ ಟಿಪ್ಪರ್‌ ಗೆ ತಲಾ 69,250 ಸಾವಿರ ದಂಡ ವಿಧಿಸಲಾಗಿದೆ.  ದಂಡವನ್ನು ಆನ್ ಲೈನ್‌ ನಲ್ಲಿ ಕಟ್ಟಿದ ಬಳಿಕ ಟಿಪ್ಪರ್‌ ಬಿಡಲಾಗಿದೆ. ಎಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜಾ ಮಾಹಿತಿ ನೀಡಿದ್ದಾರೆ.

Key words: Three tippers –without -permit –seized-Rs 1.74 lakh- fine