ನಿಂತಿದ್ದ ಟ್ರ್ಯಾಕ್ಟರ್‌ ಗೆ ಕಾರು ಡಿಕ್ಕಿಯಾಗಿ ಮೂವರು ಸಾವು.

ಮೈಸೂರು,ಜುಲೈ,18,2023(www.justkannada.in): ನಿಂತಿದ್ದ ಟ್ರ್ಯಾಕ್ಟರ್‌ ಗೆ ಕಾರು ಡಿಕ್ಕಿ,ಮೂವರು ಸಾವನ್ನಪ್ಪಿರುವ ಘಟನೆ ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಿರಿಯಾಪಟ್ಟಣ ತಾಲ್ಲೂಕು ಕಂಪ್ಲಾಪುರ ಬಳಿ ನಡೆದಿದೆ.

ಮುದಾಸೀರ್,ಮುಜಾಯಿದ್ ಅಹಮದ್ ಪಾಷಾ ಮೃತಪಟ್ಟವರು ಎಂದು ಗುರುತಿಸಲಾಗಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಗೆ ಎರಡು ಕಾರುಗಳು ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಕಾರಿನಲ್ಲಿದ್ದ ಮೂವರ ಸಾವನ್ನಪ್ಪಿ ಮೂವರಿಗೆ ತೀವ್ರ ಗಾಯವಾಗಿದೆ.

ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವಾಗ  ಇಂದು ಬೆಳಗಿನ ಜಾವ 4.30ಕ್ಕೆಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.

Key words: Three -people -died – car -collided – parked –tractor-mysore