ಈ ಬಾರಿಯ ಐಪಿಎಲ್’ನಲ್ಲಿ ಈ ಮೂರು ಪ್ರಮುಖ ನಿಯಮ ಬದಲಾವಣೆ

ಬೆಂಗಳೂರು, ಮಾರ್ಚ್ 30, 2021 (www.justkannada.in): ಈ ಬಾರಿಯ ಐಪಿಎಲ್ ಟೂರ್ನಿಯ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಬಿಸಿಸಿಐ ಮಾಡಿದೆ.

ಇತ್ತೀಚೆಗೆ ಇಂಗ್ಲೆಂಡ್​ ವಿರುದ್ಧದ ಟಿ20 ಪಂದ್ಯದ ವೇಳೆ ಭಾರೀ ವಿವಾದಕ್ಕೆ ಕಾರಣವಾಗಿದ್ದ ಸಾಫ್ಟ್ ಸಿಗ್ನಲ್ ನಿಯಮವನ್ನು ಬದಲಾವಣೆ ಮಾಡಲಾಗಿದೆ.

ಹೊಸ ನಿಯಮದ ಪ್ರಕಾರ ಅಂಪೈರ್ ಸಾಫ್ಟ್ ಸಿಗ್ನಲ್ ನೀಡಿದರೂ, ಅದು ಅಂತಿಮ ತೀರ್ಪು ಆಗಿರುವುದಿಲ್ಲ. ಮೂರನೇ ಅಂಪೈರ್ ಅದನ್ನು ಪರಿಶೀಲಿಸಿ ತೀರ್ಪನ್ನು ಬದಲಿಸಬಹುದಾಗಿದೆ.

ಬದಲಾದ ಮತ್ತೊಂದು ನಿಯಮವೆಂದರೆ. ಕಳೆದ ಸೀಸನ್​ನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಶಾರ್ಟ್ ರನ್​ ತೀರ್ಪನ್ನು, ಈ ಬಾರಿ ಮೂರನೇ ಅಂಪೈರ್ ಪರಿಶೀಲಿಸಲಿದ್ದಾರೆ.

ಮೂರನೇ ಬದಲಾವಣೆ, ನೋ ಬಾಲ್ ನಿಯಮದಲ್ಲೂ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದಂತೆ ಆನ್​-ಫೀಲ್ಡ್ ಅಂಪೈರ್ ನೋ ಬಾಲ್ ತೀರ್ಪು ನೀಡಿದರೂ, ಅದನ್ನು ಪರಿಶೀಲಿಸಿ ಮೂರನೇ ಅಂಪೈರ್ ತೀರ್ಪನ್ನು ರದ್ದುಗೊಳಿಸಬಹುದು.