Saturday, August 8, 2026

BDA Apartments

Home Crime ಒಂದೇ ಕುಟುಂಬದ ಮೂವರು ಅನುಮಾನಸ್ಪದ ಸಾವು.

ಒಂದೇ ಕುಟುಂಬದ ಮೂವರು ಅನುಮಾನಸ್ಪದ ಸಾವು.

ಕೊಪ್ಪಳ,ಮೇ,28,2024 (www.justkannada.in):  ಒಂದೇ ಕುಟುಂಬದ ಮೂವರು (ಅಜ್ಜಿ ಮಗಳು ಮೊಮ್ಮಗ) ಅನುಮಾನಾಸ್ಪದವಾಗಿ ಸಾವನನಪ್ಪಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ತಾಲೂಕಿನ ಹೊಸಲಿಂಗಪುರದಲ್ಲಿ ಈ ಘಟನೆ ನಡೆದಿದೆ. ರಾಜೇಶ್ವರಿ (50), ಮಗಳು ವಸಂತ (28) ಮೊಮ್ಮಗ ಸಾಯಿ ಧರ್ಮತೇಜ (5) ಮೃತಪಟ್ಟವರು. ಅಜ್ಜಿ ಮತ್ತು ಮೊಮ್ಮಗನ ಶವ ಬೆಡ್ ರೂಮ್ ನಲ್ಲಿ ಪತ್ತೆಯಾದರೇ ಮಗಳು ವಸಂತ ಮೃತ ದೇಹ ಅಡುಗೆ ಮನೆಯಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಸಂತ  ಗಂಡನೊಂದಿಗೆ ಜಗಳವಾಡಿ ತವರು ಮನೆಯಲ್ಲಿ ಇದ್ದಳು  ಘಟನಾ ಸ್ಥಳಕ್ಕೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Three, deaths, same, family