ಬೆಂಗಳೂರಿನಲ್ಲಿ  ಕೊರೋನಾಗೆ ಮತ್ತೆ ಮೂವರು ಬಲಿ: ಸೋಂಕಿತ ದಂಪತಿ ಮತ್ತು ಓರ್ವ ವ್ಯಕ್ತಿ ಸಾವು…

ಬೆಂಗಳೂರು,ಜೂ,13,2020(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು ಇಂದು ಒಂದೇ ದಿನ 7 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ.

ಬಿಟಿಎಂ ಲೇಔಟ್ ನ ದಂಪತಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 65 ವರ್ಷದ ವೃದ್ಧ 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇಬ್ಬರನ್ನ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

ಮೃತ ವೃದ್ಧ ಬಿಟಿಎಂ ಲೇಔಟ್ ನಲ್ಲಿ ಹಲವೆಡೆ ಓಡಾಡಿದ್ದರು ಎನ್ನಲಾಗಿದ್ದು ವೃದ್ಧನ ಸಂಪರ್ಕದಲ್ಲಿದ್ದ ಐವರನ್ನ ಕ್ವಾರಂಟೈನ್ ಮಾಡಲಾಗಿದೆ.three-death-corona-virus-bangalore

ಇನ್ನೊಂದೆಡೆ ಗುರಪ್ಪನಪಾಳ್ಯದ ನಿವಾಸಿ ವ್ಯಕ್ತಿಗೆ ಎರಡು ದಿನಗಳ ಹಿಂದೆ ಕೊರೋನಾ ಸೋಂಕು ದೃಢಪಟ್ಟಿತ್ತು. ನಂತರ ವ್ಯಕ್ತಿಯನ್ನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಈ ಮೂಲಕ ಇಂದು ಒಂದೇ ದಿನ ಬೆಂಗಳೂರಿನಲ್ಲಿ 7 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಕೊರೋನಾಗೆ ಬಲಿಯಾದವರ ಸಂಖ್ಯೆ ಬೆಂಗಳೂರಿನಲ್ಲಿ 37ಕ್ಕೆ ಏರಿಕೆಯಾಗಿದೆ.

Key words: Three- death- corona virus- Bangalore