ಬಿಜೆಪಿ ಸರ್ಕಾರ ರಚನೆಗೆ ಈ ಮೂವರ ಕೊಡುಗೆ ಅಪಾರ: ಸಿಎಂ ಬಿಎಸ್ ವೈ ಕೊಟ್ಟ ಮಾತಿನಂತೆ ನಡೆದುಕೊಳ್ತಾರೆ-ಸಚಿವ ಬಿ.ಸಿ ಪಾಟೀಲ್…

ಕೊಪ್ಪಳ,ಜೂ,5,2020(www.justkannada.in):  ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್, ಆರ್.ಶಂಕರ್ ಈ ಮೂವರ ಕೊಡುಗೆ ಅಪಾರ. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.

ಕೊಪ್ಪಳದಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ಬೈ ಎಲೆಕ್ಷನ್ ನಲ್ಲಿ ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಸ್ಪರ್ಧಿಸುವುದು ಬೇಡ ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ ಅವರು ಸ್ಪರ್ಧಿಸಿದರು. ಹೀಗಾಗಿ ಬಚ್ಚೇಗೌಡರ ಕುಟುಂಬದಿಂದ ಎಂಟಿಬಿ ಅವರಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.three-contributed-formation-bjp-government-koppal-minister-bc-patil

 ರಾಜ್ಯದಲ್ಲಿ ಇಬ್ಬರು ಸಿಎಂ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಬಿ.ಸಿ ಪಾಟೀಲ್,  ಆಡಳಿತದಲ್ಲಿ ವಿಜಯೇಂದ್ರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಎಲ್ಲರನ್ನು ಸರಿಯಾಗಿ ನಡೆಸಿಕೊಂಡಿದ್ದರೆ. ಸರಿಯಾಗಿ ಆಡಳಿತ ನಡೆಸಿದಿದ್ದರೆ ಕಾಂಗ್ರೆಸ್‌ಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ.ಎಲ್ಲರೂ ತಮ್ಮತಮ್ಮ ಸ್ವಾರ್ಥಕ್ಕೆ ಗೋಡೆಗಳನ್ನು ಕಟ್ಟಿಕೊಂಡು ಸರ್ಕಾರ ಕೆಡವಿದ್ದಾರೆ ಎಂದು ಕಿಡಿಕಾರಿದರು.

Key words:  three –contributed- – formation – BJP government-koppal- minister- BC Patil