ಉಡುಪಿ ಜಿಲ್ಲೆಯಲ್ಲಿ ಇಂದು 350ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಬರುವ ಸಾಧ್ಯತೆ-ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ …

ಚಿಕ್ಕಬಳ್ಳಾಪುರ,ಜೂ,5,2020(www.justkannada.in): ಉಡುಪಿ ಜಿಲ್ಲೆಯಲ್ಲಿ ಇಂದು 350ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಬರುವ ಸಾಧ್ಯತೆ  ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್  ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಸಚಿವ ಸುಧಾಕರ್, ಉಡುಪಿಯಲ್ಲಿ ಇಂದು ಹೆಚ್ಚು ಕರೋನಾ ಪ್ರಕರಣ ಬರುವ ಸಾಧ್ಯತೆ ಇದೆ. ಉಡುಪಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದೇವೆ.  ಕೊರೋನಾ ಪಾಸಿಟಿವ್ ಬಂದವರ ಮನೆ ಸೀಲ್ ಡೌನ್ ಮಾಡಲಾಗುತ್ತಿದೆ. ಮುಂಬೈನಿಂದ ಬಂದವರಲ್ಲೇ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಹೀಗಾಗಿ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಆಗಬೇಕು ಎಂದು ಸೂಚಿಸಿದರು.over-350-positive-cases-udupi-district-today-minister-dr-k-sudhakar

ಚಿಕ್ಕಬಳ್ಳಾಪುರದ ಇಬ್ಬರು ವೃದ್ಧ ದಂಪತಿಗೆ ಕೊರೋನಾ ಸೋಂಕು ದೃಢ. ಮೂರು ದಿನಗಳ ಹಿಂದೆ ಹಿಂದೂಪುರದಿಂದ ಬಂದಿದ್ದ ವೃದ್ಧದಂಪತಿಗೆ  ಕೊರೋನಾ ಪಾಸಿಟಿವ್ ಇರುವ ಬಗ್ಗೆ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದರು. ಈ ಬಗ್ಗೆ ಡಿಸಿ ಲತಾ ಅವರು ಸಚಿವರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

Key words: Over 350 positive- cases – Udupi district- today-minister-Dr. K. Sudhakar