ಕಪಿಲಾ ನದಿಯಲ್ಲಿ ಮುಳುಗಿ ಮೂವರು ಅಯ್ಯಪ್ಪ ಮಾಲಾಧಾರಿಗಳು ಸಾವು.

ಮೈಸೂರು,ಜನವರಿ,19,2024(www.justkannada.in): ಕಪಿಲಾ ನದಿಯಲ್ಲಿ ಮುಳುಗಿ ಮೂವರು ಅಯ್ಯಪ್ಪ ಮಾಲಾಧಾರಿಗಳು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡಿನ ಹೆಜ್ಜಿಗೆ ಸೇತುವೆ ಬಳಿ ಈ ಘಟನೆ ನಡೆದಿದೆ. ಮೃತಪಟ್ಟ ಮೂವರು ತುಮಕೂರು ಮೂಲದವರು ಎನ್ನಲಾಗಿದೆ. ಐವರು ಸ್ನಾನ ಮಾಡಲು ಕಪಿಲಾ ನದಿಗೆ ಇಳಿದಿದ್ದರು. ಈ ವೇಳೆ ಮೂವರು ಅಯ್ಯಪ್ಪ ಮಾಲಾಧಾರಿಗಳು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದ್ದು ಕೊಚ್ಚಿ ಹೋದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

Key words: Three- Ayyappa -Maladhari-death- drowned – Kapila- river-mysore