ಜಾತ್ರೆ ವೇಳೆ ನೆಲಕ್ಕುರುಳಿದ 120 ಅಡಿ ಎತ್ತರದ ಬೃಹತ್ ತೇರು.

ಬೆಂಗಳೂರು, ಏಪ್ರಿಲ್, 6, 2024 (www.justkannada.in):  ಜಾತ್ರೆ ವೇಳೆ 120 ಅಡಿ ಎತ್ತರದ ಬೃಹತ್ ತೇರು ನೆಲಕ್ಕುರುಳಿದ ಘಟನೆ ಬೆಂಗಳೂರು ನಗರ ಆನೇಕಲ್ ತಾಲ್ಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ.

ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಆಗಮಿಸುತ್ತಿದ್ದ  120 ಅಡಿ ಎತ್ತರದ ಬೃಹತ್ ತೇರು ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಹಿಲಲಿಗೆ ಗ್ರಾಮದಿಂದ ಹುಸ್ಕೂರಿಗೆ ತೇರನ್ನು ಎಳೆದು ತರಲಾಗುತ್ತಿತ್ತು. ಎತ್ತುಗಳು, ಟ್ರ್ಯಾಕ್ಟರ್ ಮೂಲಕವಾಗಿ ತೇರನ್ನು ಎಳೆದು ತರಲಾಗುತ್ತಿತ್ತು. ಈ ವೇಳೆ ಕಮ್ಮಸಂದ್ರದ ಬಳಿ ತೇರು ನಿಯಂತ್ರಣ ತಪ್ಪಿ ನೆಲಕ್ಕುರುಳಿದೆ.

ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಜಾತ್ರೆಗೆ ತೆರಳುತ್ತಿದ್ದ ಬೃಹತ್ ತೇರು ಏಕಾಏಕಿ ನಿಯಂತ್ರಣ ತಪ್ಪಿ ಬಿದ್ದಿರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.

Key words: Theru, collapsed, fair