ದೆಹಲಿ ವಿಶೇಷ ಪೊಲೀಸ್ ಘಟಕದಿಂದ ಸಂಸದ ಪ್ರತಾಪ್ ಸಿಂಹ ಹೇಳಿಕೆ ದಾಖಲು ಸಾಧ್ಯತೆ

ಬೆಂಗಳೂರು, ‌ಡಿಸೆಂಬರ್ 17, 2013 (www.justkannada.in): ಸಂಸತ್ ಪ್ರವೇಶದ ಪಾಸು ನೀಡಿದ್ದ ಸಂಬಂಧ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಪಡೆಯುವ ಸಾಧ್ಯತೆ ಇದೆ.

ಪಾಸ್ ಗಾಗಿ ಮನೋರಂಜನ್ ಕಳೆದ ಮೂರು ತಿಂಗಳಿನಿಂದ ಪ್ರತಾಪ್ ಸಿಂಹ ಅವರ ಕಚೇರಿಗೆ ಭೇಟಿ ನೀಡಿ ಹಲವು ಬಾರಿ ಮನವಿ ಮಾಡಿದ್ದ. ಮೈಸೂರಿನ ನಿವಾಸಿ ಎಂದು ಹೇಳಿ ಪಾಸ್ ಪಡೆದುಕೊಂಡಿದ್ದ.

ಈ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಹೇಳಿಕೆ ಪಡೆಯಲು ವಿಶೇಷ ಸೆಲ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಇನ್ನು ಪ್ರಕರಣದ ಆರನೇ ಆರೋಪಿ ಮಹೇಶ್ ಕುಮಾವತ್ ಅವರನ್ನು ಶನಿವಾರ ಬಂಧಿಸಲಾಗಿದ್ದು,  ನಂತರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆರೋಪಿಯನ್ನು ಏಳು ದಿನಗಳ ಕಾಲಪೊಲೀಸ್ ಕಸ್ಟಡಿಗೆ ನೀಡಿದೆ.

ಈ ನಡುವೆ ಪ್ರತಾಪ್ ಸಿಂಹ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಸಂಸತ್ತಿನ ಒಳಗೆ ಹಾಗೂ ಹೊರಗೆ ಪ್ರತಿಭಟನನೆಗಳನ್ನು ನಡೆಸುತ್ತಿದ್ದರೂ, ಪ್ರತಾಪ್ ಸಿಂಹ ಅವರು ಇದೂವರೆಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಆದರೆ, ಘಟನೆ ಬಗ್ಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದ್ದರು.