ಮೈಸೂರಲ್ಲಿ ಗೃಹಲಕ್ಷಿ ಯೋಜನೆ ಸರ್ಟಿಫಿಕೇಟ್ ಸಿದ್ದಪಡಿಸುತ್ತಿದ್ದ ಸೈಬರ್ ಸೆಂಟರ್ ಮಾಲೀಕ ಪೊಲೀಸರ ಬಲೆಗೆ

ಮೈಸೂರು, ಜುಲೈ 26, 2023 (www.justkannada.in): ಮೈಸೂರಿನಲ್ಲಿ ಗೃಹಲಕ್ಷಿ ಯೋಜನೆ ಸರ್ಟಿಫಿಕೇಟ್ ಸಿದ್ದಪಡಿಸುತ್ತಿದ್ದ  ಸೈಬರ್ ಸೆಂಟರ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಸುರೇಶ್ ಕುಮಾರ್ ಬಂಧಿತ ಆರೋಪಿ. ಈತ ಮೇಟಗಳ್ಳಿ ಸುಧಾಮೂರ್ತಿ ರಸ್ತೆಯಲ್ಲಿರುವ ನಕುಲ್ ನೆಟ್ ವರ್ಲ್ಡ್ ಸೈಬರ್ ಸೆಂಟರ್ ನಡೆಸುತ್ತಿದ್ದ. ಎಸಿಪಿ ಗಜೇಂದ್ರ ನೇತೃತ್ವದಲ್ಲಿ ದಾಳಿ ನಡೆಸಿರುವ ಪೋಲೀಸರು ಈತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ

ಫೇಕ್ ಸರ್ಟಿಫಿಕೇಟ್ ಗಳನ್ನ ವಶಕ್ಕೆ ಪಡೆದುಕೊಂಡಿರುವ ಪೋಲೀಸರು, ಸುಕೇಶ್ ಕುಮಾರ್ ಎಂಬುವರ ದೂರಿನ ಮೇರೆಗೆ ದಾಳಿ ನಡೆಸಿದ್ದರು. ಸದ್ಯ ಸೈಬರ್ ಸೆಂಟರ್ ಗೆ ಪೋಲೀಸರು ಬೀಗ ಜಡಿದಿದ್ದಾರೆ.

ಈತ ನಕುಲ್ ನೆಟ್ ವರ್ಲ್ಡ್ ಎಂಬ ಅನಧಿಕೃತ ಸೇವಾ ಕೇಂದ್ರ ಪ್ರಾರಂಭಿಸಿ, ಗೃಹಲಕ್ಷ್ಮಿ ಯೋಜನೆಯ ಫೇಕ್ ಸರ್ಟಿಫಿಕೇಟ್ ಮಾಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಮೇಟಗಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.