ಮದುವೆಗೆ ಹೋಗಿದ್ದವರು ಮಸಣಕ್ಕೆ: ಬೈಕ್, ಬಸ್ ನಡುವೆ ಡಿಕ್ಕಿಯಾಗಿ  ತಾಯಿ ಮಗ ಸಾವು..

ಮೈಸೂರು,ಜೂ,5,2019(www.justkannada.in) ಬೈಕ್ ಮತ್ತು ಬಸ್ ನಡುವೆ ಡಿಕ್ಕಿಯಾಗಿ  ತಾಯಿ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಬಳಿ ಈ ಘಟನೆ ನಡೆದಿದೆ. ಸುಭದ್ರಮ್ಮ(55), ಶಿವಣ್ಣ (35) ಮೃತಪಟ್ಟವರು. ಮೃತರು ರುದ್ರಪಟ್ಟಣಕ್ಕೆ ಮದುವೆಗೆ ಹೋಗಿದ್ದರು. ಮದುವೆ ಮುಗಿಸಿ ವಾಪಸ್ ಬರುವಾಗ ಬಸ್  ಬೈಕ್ ಗೆ ಡಿಕ್ಕಿಯಾಗಿದೆ.  ಈ ವೇಳೆ ತಲೆ, ಮೈಗೆ ತೀವ್ರ ಪೆಟ್ಟಾಗಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಕುರಿತು ಕೆ.ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: The bike collided with the bus and the mother’s son died.

#Krnagar #bike #collided #bus