ನೀರಿನ ಸಂರಕ್ಷಣೆಗಾಗಿ ಕಿರುತೆರೆಗೆ ಕಾಲಿಟ್ಟ ತಲೈವಾ!

ಮೈಸೂರು, ಜನವರಿ 30, 2019 (www.justkannada.in): ನೀರಿನ ಸಂರಕ್ಷಣೆಗೆ ಕಟಿಬದ್ಧರಾಗಿರೋ ತಲೈವಾ ಡಿಸ್ಕವರಿ ಚಾನೆಲ್​ಗಾಗಿ ಕಿರುತೆರೆಗೂ ಪಾದಾರ್ಪಣೆ ಮಾಡಿದ್ದಾರೆ.

ಇದು ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗೋ ಮ್ಯಾನ್ ವರ್ಸಸ್​ ವೈಲ್ಡ್​ ಕಾರ್ಯಕ್ರಮಕ್ಕಾಗಿ ನಡೆದ ಚಿತ್ರೀಕರಣ ಅಂತ ಹೇಳಲಾಗ್ತಿತ್ತು. ಆದ್ರೆ ಇದು ಹೊಸ ಶೋವೊಂದಕ್ಕಾಗಿ ನಡೆದ ಶೂಟಿಂಗ್ ಅಂತ ತಿಳಿದುಬಂದಿದೆ.

‘ಇಂಟು ದಿ ವೈಲ್ಡ್​ ವಿತ್​ ಬೇರ್​ ಗ್ರಿಲ್ಸ್’​ ಅನ್ನೋ ಹೊಸ ಕಾರ್ಯಕ್ರಮಕ್ಕಾಗಿ ತಲೈವಾ ರಜಿನಿಕಾಂತ್​​ ಜೊತೆ ಶೂಟಿಂಗ್ ನಡೆಸಿದ್ದಾಗಿ ಬೇರ್​ ಗ್ರಿಲ್ಸ್​ ಟ್ವೀಟ್​ ಮಾಡಿದ್ದಾರೆ.