ಕೆಜಿಎಫ್-2 ಟೀಂ ಸೇರಿದ ತೆಲುಗು ನಟ ರಾವ್ ರಮೇಶ್

ಬೆಂಗಳೂರು, ಫೆಬ್ರವರಿ 11, 2020 (www.justkannada.in): ಕೆಜಿಎಫ್ 2 ಟೀಂಗೆ ಹೊಸ ನಟನ ಎಂಟ್ರಿಯಾಗಿದೆ.

ಮೊನ್ನೆಯಷ್ಟೇ ಬಾಲಿವುಡ್ ನಟಿ ರವೀನಾ ಟಂಡನ್‍ ಕೆಜಿಎಫ್2 ಟೀಂ ಸೇರಿದ್ದ ವಿಷಯವನ್ನು ಚಿತ್ರ ತಂಡ ಟ್ವಿಟ್ಟರ್ ನಲ್ಲಿ ಘೋಷಿಸಿತ್ತು. ಇದೀಗ ತೆಲುಗು ನಟ ರಾವ್ ರಮೇಶ್ ಕೆಜಿಎಫ್ 2 ಚಿತ್ರತಂಡ ಸೇರಿಕೊಂಡಿದ್ದಾರೆ.

ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡದ ಜತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದರೊಂದಿಗೆ ಕೆಜಿಎಫ್ 2 ಗೆ ಮತ್ತಷ್ಟು ಸ್ಟಾರ್ ನಟರ ಆಗಮನವಾದಂತಾಗಿದೆ.