Wednesday, July 29, 2026

BDA Apartments

Home Front Page ಟಿಆರ್ ​ಎಸ್​ ಪಕ್ಷವನ್ನ ಬಿಆರ್​ ಎಸ್​ ಎಂದು ಮರುನಾಮಕರಣ ಮಾಡಿದ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್...

ಟಿಆರ್ ​ಎಸ್​ ಪಕ್ಷವನ್ನ ಬಿಆರ್​ ಎಸ್​ ಎಂದು ಮರುನಾಮಕರಣ ಮಾಡಿದ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್

ಹೈದರಾಬಾದ್,ಅಕ್ಟೋಬರ್,5,2022(www.justkannada.in): ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ ಎಸ್) ಪಕ್ಷದ ಹೆಸರನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ ಎಸ್) ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್  ಮರುನಾಮಕರಣ ಮಾಡಿದ್ದಾರೆ.

ಕೆ. ಚಂದ್ರಶೇಖರ್ ರಾವ್  ರಾಷ್ಟ್ರೀಯ ಪಕ್ಷ ಘೋಷಣೆ ಮಾಡಿದ್ದು, ತಮ್ಮ ಪಕ್ಷಕ್ಕೆ ಭಾರತ ರಾಷ್ಟ್ರ ಸಮಿತಿ ಎಂದು ಹೆಸರಿಟ್ಟಿದ್ದಾರೆ.ತೆಲಂಗಾಣ ಭವನದಲ್ಲಿ ಕೆಸಿಆರ್ ತಮ್ಮ ಹೊಸ ಪಕ್ಷ ಬಿಆರ್‌ಎಸ್ ಘೋಷಣೆ ಮಾಡಿದ್ದಾರೆ.

ಇದಕ್ಕೂ ಮುನ್ನ ಪಕ್ಷದ ಸಾಮಾನ್ಯ ಸಭೆಯಲ್ಲಿ ಪಕ್ಷದ ಮರುನಾಮಕರಣದ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ವೇಳೆ ಪಕ್ಷದ ಬೆಂಬಲಿಗರು ಪಟಾಕಿ ಸಿಡಿಸಿ, ಕೆಸಿಆರ್ ಪರ ಘೋಷಣೆ ಕೂಗಿ ಸಂಭ್ರಮವನ್ನು ಆಚರಿಸಿದರು.

ಈ ವೇಳೆ ಜೆಡಿಎಸ್​ ನಾಯಕ ಕರ್ನಾಟಕದ ಮಾಜಿ ಸಿಎಂ ಹೆಚ್.​ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Key words: Telangana -CM -K. Chandrasekhar Rao- Renamed -TRS party – BRS.