ವಿಶ್ವಕಪ್ ಕ್ರಿಕೆಟ್: ಇಂದು ಮಳೆ ಬಂದು ಪಂದ್ಯ ರದ್ದಾದರೆ ಟೀಂ ಇಂಡಿಯಾ ಫೈನಲ್ಸ್’ಗೆ

ಲಂಡನ್, ಜುಲೈ 10, 2019 (www.justkannada.in): ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಇವತ್ತು ಕೂಡ ಮ್ಯಾಂಚೆಸ್ಟರ್​​ನಲ್ಲಿ ಇಡೀ ದಿನ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ.

ಮಳೆ ಬಂದು ಪಂದ್ಯ ಅರ್ಧಕ್ಕೆ ನಿಂತರೆ ಡಕ್ವರ್ಥ್ ಲೂಯಿಸ್ ನಿಯಮ ಅನ್ವಯವಾಗಲಿದೆ. ಒಂದೊಮ್ಮೆ ಮಳೆಯಿಂದಾಗಿ ದಿನದ ಆಟವೇ ಸಂಪೂರ್ಣ ರದ್ದಾದರೆ ಭಾರತವು ಫೈನಲ್ ತಲುಪುವುದು ಖಚಿತ.

ರೌಂಡ್‌ ರಾಬಿನ್ ಲೀಗ್‌ನಲ್ಲಿ 15 ಪಾಯಿಂಟ್ಸ್‌ ಗಳಿಸಿರುವ ಭಾರತ ಅಗ್ರಸ್ಥಾನದಲ್ಲಿದೆ. 11 ಅಂಕ ಗಳಿಸಿರುವ ನ್ಯೂಜಿಲ್ಯಾಂಡ್ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಭಾರತಕ್ಕೇ ಫೈನಲ್ ಟಿಕೆಟ್ ಕನ್ಫರ್ಮ್ ‌ಆಗಲಿದೆ.