ಜುಲೈ’ನಲ್ಲಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ: ಸೌರವ್ ಗಂಗೂಲಿ

ಬೆಂಗಳೂರು, ಮೇ 11, 2021 (www.justkannada.in): ಜುಲೈ’ನಲ್ಲಿ ಸೀಮಿತ ಓವರ್ ಗಳ ಸರಣಿ ಆಡಲು ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಮಾಡಲಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ವಿಶೇಷ ಎಂದರೆ ಈ ಸರಣಿಗೆ ಭಾರತ ತಂಡದ ನಾಯಕ ಕೊಯ್ಲಿ, ಉಪನಾಯಕ ರೋಹಿತ್ ಗೆ ವಿಶ್ರಾಂತಿ ನೀಡಲಾಗುತ್ತಿದೆ.

ಪ್ರಮುಖ ಆಟಗಾರರಿಗೆ ಭವಿಷ್ಯದ ಪ್ರಮುಖ ಟೂರ್ನಿಗಳ ದೃಷ್ಟಿಯಿಂದ ವಿಶ್ರಾಂತಿ ನೀಡಲಾಗುತ್ತದೆ ಎಂದು ಗಂಗೂಲಿ ತಿಳಿಸಿದ್ದಾರೆ. ಜುಲೈನಲ್ಲಿ ಟಿ20 ಮತ್ತು ಏಕದಿನ ಪಂದ್ಯಗಳ ಸರಣಿಯನ್ನು ಭಾರತ ಲಂಕಾ ನೆಲದಲ್ಲಿ ಆಡಲಿದೆ.