Friday, August 21, 2026

BDA Apartments

Home Front Page ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ

ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ

ಬೆಂಗಳೂರು, ಜೂನ್ 11, 2021 (www.justkannada.in): ಶ್ರೀಲಂಕಾದಲ್ಲಿ ನಡೆಯಲಿರುವ ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳ ಸರಣಿಗಾಗಿ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದು, ಭುವನೇಶ್ವರ್ ಕುಮಾರ್ ಉಪ ನಾಯಕನಾಗಿದ್ದಾರೆ.

ತಂಡದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ ನೀಡಲಾಗಿದೆ. ಮನೀಷ್ ಪಾಂಡೆ, ಕೃಷ್ಣಪ್ಪ ಗೌತಮ್ ಜೊತೆ ದೇವದತ್ತ ಪಡಿಕ್ಕಲ್ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ.

ಟೆಸ್ಟ್ ಸರಣಿಗಾಗಿ ಭಾರತ ಹಿರಿಯರ ತಂಡ ಇಂಗ್ಲೆಂಡ್ ನಲ್ಲಿರುವ ಕಾರಣ ಬಹುತೇಕ ಹೊಸಬರ ತಂಡವನ್ನು ಕಟ್ಟಲಾಗಿದೆ.

ಇಬ್ಬರು ವಿಕೆಟ್ ಕೀಪರ್, ಮೂರು ಸ್ಪಿನ್ನರ್, ನಾಲ್ವರು ವೇಗಿಗಳು, ಮೂವರು ಆಲ್ ರೌಂಡರ್ ಒಳಗೊಂಡಂತೆ ಒಟ್ಟು 19 ಜನರ ತಂಡ ಆಯ್ಕೆ ಮಾಡಲಾಗಿದೆ.