ಶಿಕ್ಷಕರು, ನಿವೃತ ಶಿಕ್ಷಕರ ಮಕ್ಕಳಿಂದ, ಪ್ರತಿಭಾವಂತ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ…!

ಬೆಂಗಳೂರು,ಡಿಸೆಂಬರ್,21,2020(www.justakannada.in) : ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಜಿಲ್ಲಾ ವಿಶ್ವವಿದ್ಯಾಲಯ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ಶಿಕ್ಷಕರುಗಳ, ನಿವೃತ ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ ಮಂಜೂರು ಮಾಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.Teachers,solve,problems,Government,bound,Minister,R.Ashok

2019-20ನೇ ಸಾಲಿನ ಏಪ್ರಿಲ್ ಮತ್ತು ಜೂನ್ 2020ರಲ್ಲಿ ನಡೆದ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ(PUC Arts, PUC Science, PUC Comeree) (CBSE/ ICSE ವಿದ್ಯಾರ್ಥಿಗಳಿಗೆ ಅವಕಾಶವಿರುವುದಿಲ್ಲ) ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ 2019-20ನೇ ಸಾಲಿನ ಪದವಿ ಅಂತಿಮ ವರ್ಷ (ಬಿಎ/ಬಿಎಸ್ಸಿ/ಬಿಕಾಂ/ಬಿ.ಇಡಿ/ ಬಿಸಿಎ/ಬಿಬಿಎಂ/ಬಿ.ಎಸ್.ಸಿ.ಎ/ ಬಿ.ಎಚ್.ಎಂ/ಎಲ್.ಎಲ್.ಬಿ) (BA/BSC/B.COM/B.ED/BCA/BBM/BHM/BSCA/LLB) ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು.

2019-20ನೇ ಸಾಲಿನಲ್ಲಿ BE 6ನೇ ಸೆಮಿಸ್ಟರ್ ಉತ್ತೀರ್ಣರಾದವರು ಹಾಗೂ ಈಗ BE 7ನೇ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಓದುತ್ತಿರುವವರು ಹಾಗೂ  2019-20ನೇ ಸಾಲಿನ 2ನೇ ಫೇಸ್ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು(MBBS, BDS,BHMS,BUMS,BAMS ಹಾಗೂ 3ನೇ ಫೇಸ್ ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ.   Teachers-retired-teachers-From-children-talented-Application-scholarship ...!

2019-20ನೇ ಸಾಲಿನಲ್ಲಿ 2ನೇ ಸೆಮಿಸ್ಟರ್ ಸ್ನಾತಕೋತ್ತರ ಪರೀಕ್ಷೆಯಲ್ಲಿ ಉತ್ತೀರ್ಣರಾದವರು (ಎಂಎ/ಎಂಎಸ್ಸಿ/ಎಂಕಾಂ/ಎಂಎಡ್?) (MA,MSC,MCOM,M.Ed, MSCA, MLIB) ಹಾಗೂ 3ನೇ ಸೆಮಿಸ್ಟರ್ ಸ್ನಾತಕೋತ್ತರ ಪದವಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

Teachers-retired-teachers-From-children-talented-Application-scholarship ...!

ಕನಿಷ್ಠ ಶೇಕಡ 60 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ನಿಗದಿತ ಅರ್ಜಿಗಳನ್ನು ಸಂಸ್ಥೆಯ ಮುಖ್ಯಸ್ಥರು ದೃಢೀಕರಿಸಿದ ಅಂಕ ಪಟ್ಟಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪರಿಶೀಲಿಸಿ ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗುವುದು. ಅರ್ಜಿ ನಮೂನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂತರ್ಜಾಲದಿಂದ (www.schooleducation.kar.nie.in) ಡೌನ್ ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ನಿಧಿಗಳ ಕಚೇರಿಗೆ ತಲುಪಿಸಲು ಡಿಸೆಂಬರ್ 31 ಕಡೆಯ ದಿನವಾಗಿದೆ ಎಂದು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

key words : Teachers-retired-teachers-From-children-talented-
Application-scholarship …!