Wednesday, August 12, 2026

BDA Apartments

Home Front Page ಕಾಂಗ್ರೆಸ್ ನವರು ಯಾರೂ ಕೈ ಕಟ್ಟಿ ಕುಳಿತಿಲ್ಲ-ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಕಾಂಗ್ರೆಸ್ ನವರು ಯಾರೂ ಕೈ ಕಟ್ಟಿ ಕುಳಿತಿಲ್ಲ-ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಕಲಬುರುಗಿ,ಆಗಸ್ಟ್,13,2024 (www.justkannada.in): ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಿತ್ತು ಹೋಗಿರುವ ದುರಂತಕ್ಕೆ ಕಾಂಗ್ರೆಸ್ ಕಾರಣ ಎಂಬ ಬಿಜೆಪಿ ಆರೋಪಕ್ಕೆ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಇಂತಹ ವಿಚಾರದಲ್ಲಿ ರಾಜಕೀಯ ಮಾಡಬಾರದು ಕಾಂಗ್ರೆಸ್ ನವರು ಯಾರು ಕೈ ಕಟ್ಟಿ ಕುಳಿತಿಲ್ಲ. ಡ್ಯಾಂ ದುರಂತ ತಿಳಿದು ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಕ್ರಸ್ಟ್ ಗೇಟ್ ರಿಪೇರಿ ಕೆಲಸ ಮಾಡಲಾಗುತ್ತಿದೆ ಎಂದರು.

ಮುಡಾ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ನಾವು ಸ್ಪಷ್ಟನೆ ನೀಡಿದರೂ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ಮುಡಾ ಕೇಸ್ ಪಿಸಿ ಆಕ್ಟ್ ನಲ್ಲಿ ಬರೋದಿಲ್ಲ. ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿದ್ದಾರೆ ಎಂದು ಕಿಡಿಕಾರಿದರು.

Key words: TB dam, Crust Gate, BJP, Minister, Priyank kharge