ಪರಪ್ಪನ ಅಗ್ರಹಾರ ಜೈಲಿಂದ ಬಿಡುಗಡೆಗಾಗಿ ಜಯಲಲಿತಾ ಆಪ್ತೆ ಸಸಿಕಲಾ ಪಾವತಿಸಿದ ಹಣ 10 ಕೋಟಿ ರೂ.

 

ಬೆಂಗಳೂರು, ನ.18, 2020 : (www.justkannada.in news) : ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ಆಪ್ತೆ, ಸಸಿಕಲಾ ನಟರಾಜನ್ ನ್ಯಾಯಾಲಯಕ್ಕೆ 10 ಕೋಟಿ ರೂ.ಪಾವತಿಸಿದ್ದಾರೆ.

ಸಸಿಕಲಾ ಪರ ವಕೀಲಾರದ ಮುತ್ತುಕುಮಾರ್ ಹಾಗೂ ರಾಜಸೇತುರ್ಪಾಂಡಿಯನ್ ಇತ್ತೀಚೆಗೆ ದಂಡದ ಮೊತ್ತವಾದ 10 ಕೋಟಿ ರೂ. ಹಣವನ್ನು ಡಿಡಿ ರೂಪದಲ್ಲಿ ಬೆಂಗಳೂರಿನ ನ್ಯಾಯಾಲಯಕ್ಕೆ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ.

Tamilnadu-sasikala-lawyers-paid-Rs.10.crore-bangalore-court-case of amassing wealth.

ಈ ಡಿಡಿ ಹಣದ ಮೊತ್ತವನ್ನು ಪಳನಿವೇಲ್, ವಾಸಂತಿದೇವಿ, ಹೇಮ ಹಾಗೂ ವಿವೇಕ್ ಎಂಬುವವರ ಹೆಸರಿಗೆ ನೀಡಲಾಗಿದೆ.
ಮುಂದಿನ ವರ್ಷದ ಅಂದ್ರೆ 2021 ರ ಜನವರಿ 27 ರಂದು ಸಸಿಕಲಾ ಬಿಡುಗಡೆ ಸಾಧ್ಯತೆ ಇದೆ ಎಂಬುದು ಆರ್‌ಟಿಐ ಅರ್ಜಿ ಮೂಲಕ ಈಗಾಗಲೇ ಬಹಿರಂಗವಾಗಿದೆ. ಸಸಿಕಲಾ ಬಿಡುಗಡೆ ಕುರಿತು ನರಸಿಂಹ ಮೂರ್ತಿ ಅವರು ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿಗೆ ಜೈಲಾಧಿಕಾರಿಗಳು ಈ ಉತ್ತರ ನೀಡಿದ್ದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ , ಜೈಲು ಶಿಕ್ಷೆಯೊಂದಿಗೆ 10 ಕೋಟಿ ರೂ. ದಂಡ ವಿಧಿಸಿತ್ತು. ಈ ಮೊತ್ತವನ್ನು ಸಸಿಕಲಾ ಪಾವತಿದರೆ ಬಿಡುಗಡೆಗೆ ಅವಕಾಶ. ಇಲ್ಲವಾದರೇ ಮತ್ತೆ ಒಂದು ವರ್ಷ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಹಣ ಪಾವತಿಸಲಾಗಿದೆ. ಹಾಗಾಗಿ ಜನವರಿಯಲ್ಲಿ ಸಸಿಕಲಾ ಬಿಡುಗಡೆ ಹಾದಿ ಸುಗಮವಾಗಿದೆ.

Tamilnadu-sasikala-lawyers-paid-Rs.10.crore-bangalore-court-case of amassing wealth.

KEY WORDS : Tamilnadu-sasikala-lawyers-paid-Rs.10.crore-bangalore-court-case of amassing wealth.

 

SUMMARY :

sasikala’s lawyers Muthukumar and Rajasenthurpandian edecntly paid a fine of Rs 10 crore in a seperate court in Bangalore in a case of amassing wealth. DD was paid in the name of Palanivel, Vasanthi Devi, Hema, Vivek. Before release she has to pay Rs 10 crore or else her jail term will be extended for a year.