ವಾಹನದಲ್ಲಿ ಕನ್ನಡ ಬಾವುಟ ಹಾಕಿದಕ್ಕೆ ತಮಿಳುಗರ ಕಿರಿಕ್ : ಬಾವುಟ ತೆಗೆಯಿರಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕನ್ನಡಿಗರು…..

ಚಾಮರಾಜನಗರ,ಜ,2,2020(www.justkannada.in): ಕೊಯಮತ್ತೂರಿನಲ್ಲಿ ತಮಿಳಿನ ಯುವಕರ ಗುಂಪೊಂದು ಕರ್ನಾಟಕ ಪ್ರವಾಸಿಗರ ಕಾರಿಗೆ ಕಟ್ಟಿದ್ದ ಕರ್ನಾಟಕದ ಬಾವುಟ ತೆಗೆಯಿರಿ ಎಂದು ಕಿರಿಕ್ ಮಾಡಿರುವ ಘಟನೆ ನಡೆದಿದೆ.

ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ 9 ಮಂದಿ ಯುವಕರ ತಂಡ ಹೊಸ ವರ್ಷಾಚರಣೆ ಪ್ರಯುಕ್ತ ಸದ್ಗುರು ಅವರ ಈಶಾ ಪೌಂಡೇಷನ್​ಗೆ ಭೇಟಿ ನೀಡಲು ತೆರಳುತ್ತಿದ್ದರು. ಯುವಕರು ವಾಹನದಲ್ಲಿ ಕನ್ನಡ ಬಾವುಟ ಕಟ್ಟಿಕೊಂಡಿದ್ದರು. ಈ ಹಿನ್ನೆಲೆ ತಮಿಳುನಾಡಿನ ಯುವಕರ ಗುಂಪೊಂದು ಒಂದೂವರೆ ಕಿ.ಮೀ ಗಿಂತಲೂ ಹೆಚ್ಚಿನ ದೂರ ಬೈಕ್​ನಲ್ಲಿ ಚೇಸ್ ಮಾಡಿಕೊಂಡು ಬಂದು ಪುಂಡಾಟ ನಡೆಸಿದ್ದಾರೆ.

ವಾಹನದಲ್ಲಿ ಕನ್ನಡ ಬಾವುಟ ಹಾಕಿದ್ದಕ್ಕೆ ತಮಿಳಿಗರ ಯುವಕರ ಗುಂಪು ಕಿರಿಕ್​ ಮಾಡಿದ್ದು, ತಮಿಳುನಾಡಿನ ಬಾವುಟವನ್ನು ನಾವು ನಿಮ್ಮ ರಾಜ್ಯಕ್ಕೆ ಹಾಕಿಕೊಂಡು ಬಂದರೆ ತಗಾದೆ ತೆಗೆಯುತ್ತೀರಿ, ಈಗ ನೀವು ಇಲ್ಲಿಗೆ ಬಂದಿದ್ದೀರಿ ಬಾವುಟ ತೆಗೆಯಿರಿ, ಇಲ್ಲದಿದ್ದರೆ, ನಿಮ್ಮ ರಾಜ್ಯಕ್ಕೆ ವಾಪಸ್ಸಾಗಿ ಎಂದು ಎಚ್ಚರಿಕೆ ನೀಡಿದರು.

ಈ ಮೂಲಕ ಕಾರಿಗೆ ಕಟ್ಟಿದ್ದ ಕನ್ನಡ ಬಾವುಟ ತೆಗೆಯುವಂತೆ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿದ್ದು, ತಮಿಳಿಗರ ದಬ್ಬಾಳಿಕೆಗೆ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗ ಯುವಕರ ಗುಂಪು ಖಡಕ್ ಉತ್ತರ ನೀಡಿದ್ದಾರೆ. ನಾವು ಯಾವುದೇ ಕಾರಣಕ್ಕೂ ಬಾವುಟ ತೆಗೆಯುವುದಿಲ್ಲ. ಕನ್ನಡ ಬಾವುಟ ಯಾವುದೇ ಕಾರಣಕ್ಕು ತೆಗೆಯುವುದಿಲ್ಲ ಎಂದು ತಮಿಳಿನಲ್ಲೆ ಎಚ್ಚರಿಕೆ ನೀಡಿದರು.

ಇಲ್ಲಿ ಬಾವುಟ ತೆಗೆಸಿದರೆ ಕರ್ನಾಟಕದಲ್ಲಿ ಬೇರೆ ಘಟನೆ ‌ನಡೆಯುತ್ತದೆ. ನಮ್ಮ ಪ್ರಾಣ ಹೋದ್ರು ಬಾವುಟ ತೆಗೆಯುವುದಿಲ್ಲ. ನಮ್ಮ ಕಾರಿನಲ್ಲಿ ನಾವು ಕಟ್ಟಿಕೊಂಡಿದ್ದೇವೆ, ಅದನ್ನು ತೆಗೆಯುವ ಪ್ರಶ್ನೆ ಇಲ್ಲ ಎಂದು ಕನ್ನಡಿಗರ ಯುವಕರ ತಂಡ ತಿರುಗೇಟು ನೀಡಿದೆ.

Key words: Tamilnadu-boys- kirik -Kannada flag – vehicle- Coimbatore