Monday, October 12, 2026

Dasara Wishes

Happy Dasara
Home Front Page ಟಿ-20 ವಿಶ್ವ ಕಪ್: ಟೀಂ ಇಂಡಿಯಾ ವರ್ಸಸ್ ಸ್ಕಾಟ್ಲೆಂಡ್‌ ಪಂದ್ಯ ಇಂದು

ಟಿ-20 ವಿಶ್ವ ಕಪ್: ಟೀಂ ಇಂಡಿಯಾ ವರ್ಸಸ್ ಸ್ಕಾಟ್ಲೆಂಡ್‌ ಪಂದ್ಯ ಇಂದು

ಬೆಂಗಳೂರು, ನವೆಂಬರ್ 05, 2021: ಟಿ-20 ವಿಶ್ವ ಕಪ್ ನಲ್ಲಿ ಇಂದು ಟೀಂ ಇಂಡಿಯಾ ಸ್ಕಾಟ್ಲೆಂಡ್‌ ತಂಡವನ್ನು ಎದುರಿಸಲಿದೆ.

ಅಫ್ಘಾನ್ ವಿರುದ್ಧ ಬುಧವಾರ ರಾತ್ರಿ ಅಬುಧಾಬಿ ಅಂಗಳದಲ್ಲಿ ಭಾರತ ತನ್ನ ನೈಜ ಆಟಕ್ಕೆ ಮರಳುವ ಮೂಲಕ ಮತ್ತೆ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಸ್ಕಾಟ್ಲೆಂಡ್‌ ಅರ್ಹತಾ ಸುತ್ತಿನಲ್ಲಿ ಬಾಂಗ್ಲಾದೇಶವನ್ನೂ ಮಣಿಸಿ, ಗೆಲುವಿನ ಹ್ಯಾಟ್ರಿಕ್‌ ಸಾಧಿಸಿ ಸೂಪರ್‌-12 ಹಂತಕ್ಕೆ ಬಂದಿತ್ತು. ಆದರೆ ಇಲ್ಲಿ ಹ್ಯಾಟ್ರಿಕ್‌ ಸೋಲಿನ ಸಂಕಟಕ್ಕೆ ಸಿಲುಕಿದೆ.

ಕೊನೆಗೂ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಗೆಲುವಿನ ಹಳಿಗೆ ಮರಳಿದ್ದು, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ಗೆ ಸವಾಲೊಡ್ಡದೆಯೇ ಶರಣಾಗಿದ್ದ ಕೊಹ್ಲಿ ಪಡೆ; ಅಪಾಯಕಾರಿ ಎನಿಸಿದ್ದ ಅಫ್ಘಾನಿಸ್ತಾನ ವಿರುದ್ಧ ಅಮೋಘ ಪ್ರದರ್ಶನ ನೀಡಿತ್ತು.