ಟಿ-20 ವಿಶ್ವಕಪ್ ಕ್ರಿಕೆಟ್: ತಂಡಗಳ ಹೆಚ್ಚಳದತ್ತ ಐಸಿಸಿ ಚಿತ್ತ

ಬೆಂಗಳೂರು, ಜೂನ್ 02, 2021 (www.justkannada.in): ಮುಂದಿನ ವಿಶ್ವಕಪ್‌ ವೇಳೆ ಹೆಚ್ಚು ತಂಡಗಳನ್ನು ಪ್ರತಿಷ್ಠಿತ ಟೂರ್ನಿಯಲ್ಲಿ ಆಡಿಸುವ ಯೋಜನೆ ಐಸಿಸಿ ಹಾಕಿಕೊಂಡಿದೆ.

ಹೌದು, ಮುಂದಿನ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳನ್ನು ಆಡಿಸುವ ಯೋಚನೆಯನ್ನು ಐಸಿಸಿ ಮಾಡಿದೆ.

2025 ಮತ್ತು 2029ಕ್ಕೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು, ಈ ಟೂರ್ನಿ ಒಟ್ಟು 8 ತಂಡಗಳ ಮಧ್ಯೆ ನಡೆಯಲಿದೆ.

ಇದು ಕ್ರಿಕೆಟ್ ಬೆಳವಣಿಗೆಗೆ ನೆರವಾಗುತ್ತದೆ. 10 ತಂಡಗಳ ಮಾದರಿ ಈ ಆಶಯವನ್ನು ಈಡೇರಿಸುತ್ತಿಲ್ಲ ಎಂದು ಐಸಿಸಿ ಬೋರ್ಡ್ ಮೀಟಿಂಗ್‌ನಲ್ಲಿದ್ದ ಮೂಲವೊಂದು ಮಾಹಿತಿ ನೀಡಿದೆ.