ಫೆಬ್ರವರಿ 4 ರಂದು ಮುಡುಕುತೊರೆ ಬ್ರಹ್ಮ ರಥೋತ್ಸವ….

ಮೈಸೂರು, ಜ,7,2020(www.justkannada.in): ಟಿ.ನರಸೀಪುರ ತಾಲ್ಲೂಕು ಮುಡುಕುತೊರೆಯಲ್ಲಿರುವ ಶ್ರೀ ಬ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮ ರಥೋತ್ಸವ ಫೆಬ್ರವರಿ 4 ರಂದು ನಡೆಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ ಮೂರ್ತಿ ಅವರು ತಿಳಿಸಿದ್ದಾರೆ.

ಈ ವರ್ಷ ಬಹುತೇಕ ಕ್ಯಾಲೆಂಡರ್‍ ಗಳಲ್ಲಿ ಬ್ರಹ್ಮ ರಥೋತ್ಸವ  ಫೆಬ್ರವರಿ 6ಕ್ಕೆ ಎಂದು ದಿನಾಂಕ ತಪ್ಪಾಗಿ ಪ್ರಕಟವಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಫೆಬ್ರವರಿ 4 ರಂದೇ ಬ್ರಹ್ಮ ರಥೋತ್ಸವ ನಡೆಯಲಿದ್ದು, ಭಕ್ತಾದಿಗಳು ಗಮನಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಜನವರಿ 28 ರಿಂದ ಫೆಬ್ರವರಿ 13 ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಜಾನುವಾರುಗಳಿಗೆ ಬೆಳಕು, ನೀರು, ನೆರಳಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಫೆಬ್ರವರಿ 7 ರಂದು ತೆಪ್ಪೋತ್ಸವ, ಫೆಬ್ರವರಿ 12 ರಂದು ಪರ್ವತ ಪರಿಷೆ ಹಾಗೂ ಕೊನೆಯ ದಿನವಾದ ಫೆಬ್ರವರಿ 13 ರಂದು ಮಹಾಭಿಷೇಕ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Key words: T.Narasipur- Mudukuttore -Brahma Rathotsavam – 4th February