ಮಂಗಳೂರಿಗೆ ಅಮಿತ್ ಶಾ ಬಂದ್ರೆ ಧರಣಿ ಹೇಳಿಕೆ ವಿಚಾರ: ಐವಾನ್ ಡಿಸೋಜಾಗೆ ನಳೀನ್ ಕುಮಾರ್ ಕಟೀಲ್ ತಿರುಗೇಟು…

ಮಂಗಳೂರು,ಜ,7,2020(www.justkannada.in):  ಮಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದರೇ ಧರಣಿ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.

ಅಮಿತ್ ಶಾ ಅವರು ಬಂದರೇ ಮಂಗಳೂರಿನಲ್ಲಿ ಶಾಂತಿ ಕದಡಲ್ಲ. ಬದಲಾಗಿ ಐವಾನ್ ಡಿಸೋಜಾ ಅವರಿಂದಲೇ ಶಾಂತಿ ಕದಡುತ್ತಿದೆ ಎಂದು ನಳೀನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ಐವಾನ್ ಡಿಸೋಜಾ ಅವರ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಐವಾನ್ ಡಿಸೋಜಾರಿಂಧ ಮಂಗಳೂರಿನಲ್ಲಿ ಶಾಂತಿ ಕದಡುತ್ತಿದೆ. ಡಿಸೋಜಾರನ್ನ ಗಡಿಪಾರು ಮಾಡಬೇಕು. ಗಡಿಪಾರು ಮಾಡುವಂತೆ ನಾವು ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಾಗೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರು ಭೇಟಿಗೆ ಸಮಯ ನಿಗದಿಯಾಗಿಲ್ಲ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.

Key words: Amit Shah –mangalore-Ivan D’Souza-   bjp state president-Naleen Kumar Kateel