ಕೊರೋನಾಗೆ ಬಲಿಯಾದ ಶಿಕ್ಷಕರ ಕುಟುಂಬಸ್ಥರಿಗೆ ಅನುಕಂಪದ ಆಧಾರದಲ್ಲಿ ನೌಕರಿ: ನೇಮಕಾತಿ ಪತ್ರ ವಿತರಣೆ…

ಬೆಂಗಳೂರು,ಮೇ,27,2021(www.justkannada.in):  ಕೊರೋನಾಗೆ ಬಲಿಯಾದ ಶಿಕ್ಷಕರ ಕುಟುಂಬಸ್ಥರಿಗೆ ಅನುಕಂಪದ ಆಧಾರದಲ್ಲಿ  ಸರ್ಕಾರಿ ನೌಕರಿ ನೀಡಲಾಗುತ್ತಿದ್ದು ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೌಕರಿಯ ನೇಮಕಾತಿ ಪತ್ರ ವಿತರಿಸಿದರು.jk

ರಾಜ್ಯದಲ್ಲಿ ಸರ್ಕಾರಿ ಸೇವೆಯಲ್ಲಿರುವಾಗಲೇ ಮೃತಪಟ್ಟ ಶಿಕ್ಷಕರ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ನಿಯಮಾನುಸಾರ ಅವರ ವಿದ್ಯಾರ್ಹತೆ ಪರಿಗಣಿಸಿ, 130 ಜನರಿಗೆ ಅನುಕಂಪದ ಆಧಾರದದಲ್ಲಿ ನೇಮಕಾತಿಯನ್ನು ನೀಡಲಾಗಿದೆ.

ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೊರೋನಾದಿಂದ ಮೃತಪಟ್ಟ ಶಿಕ್ಷಕರ ಕುಟುಂಬದ ಸದಸ್ಯರಿಗೆ  ಸಾಂಕೇತಿಕವಾಗಿ ಅನುಕಂಪದ ನೌಕರಿಯ ನೇಮಕಾತಿ ಪತ್ರಗಳನ್ನು ವಿತರಿಸಿದರು.

Key words: sympathy –corona –teacher-families-job-minister-suresh kumar