Sunday, September 20, 2026

BDA Apartments

ಸಯ್ಯದ್ ಇಸಾಕ್ ಅವರ ಗ್ರಂಥಾಲಯ ನಿರ್ಮಾಣಕ್ಕೆ ಸಭೆಯಲ್ಲಿ ತೀರ್ಮಾನ… BDA JK_Adv BDA Adv
Home Front Page ಸಯ್ಯದ್ ಇಸಾಕ್ ಅವರ ಗ್ರಂಥಾಲಯ ನಿರ್ಮಾಣಕ್ಕೆ ಸಭೆಯಲ್ಲಿ ತೀರ್ಮಾನ…

ಸಯ್ಯದ್ ಇಸಾಕ್ ಅವರ ಗ್ರಂಥಾಲಯ ನಿರ್ಮಾಣಕ್ಕೆ ಸಭೆಯಲ್ಲಿ ತೀರ್ಮಾನ…

ಮೈಸೂರು,ಏಪ್ರಿಲ್,16,2021(www.justkannada.in)  ಬೆಂಕಿಗಾಹುತಿಯಾದ  ಸಯ್ಯದ್ ಇಸಾಕ್ ಅವರ ಗ್ರಂಥಾಲಯಯನ್ನ ಪುನಃ ನಿರ್ಮಾಣಕ್ಕೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ನೇತೃತ್ವದಲ್ಲಿ ಪಾಲಿಕೆ ಸಭಾಂಗಣದಲ್ಲಿ ಮೈಸೂರು ನಗರ ಗ್ರಂಥಾಲಯ  ಉಪನಿರ್ದೇಶಕ ಬಿ ಮಂಜುನಾಥ್, ಗ್ರಂಥಾಲಯ ಪ್ರಾಧಿಕಾರದ ಸದಸ್ಯರ ಜತೆ ಸಭೆ ನಡೆಸಲಾಯಿತು. ಸಭೆಯಲ್ಲಿ ನಗರದ ಗ್ರಂಥಾಲಯಗಳ ಪರಿಸ್ಥಿತಿ ಕುರಿತು, ಗ್ರಂಥಾಲಯಗಳ ನವೀಕರಣ, ಸಮಸ್ಯೆ ಕುರಿತು ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಮಾಹಿತಿ ನೀಡಿದರು.

Syed Isak- library- mysore city corporation- commissioner - Shilpa Nag-meeting
ಕೃಪೆ-internet

ವಾರ್ಷಿಕ ಆದಾಯ, ಬಜೆಟ್ ಟೆಂಡರ್ ಪ್ರಕ್ರಿಯೆ ಹಾಗೂ ಗ್ರಂಥಾಲಯ ಮೆಂಬರ್ ಶಿಪ್ ಕುರಿತು ವಿಚಾರ ಸಭೆಯಲ್ಲಿ  ಚರ್ಚೆ ನಡೆಸಲಾಯಿತು. ಹಾಗೆಯೇ ಸಭೆಯಲ್ಲಿ ಮೈಸೂರಿನ ಪ್ರತಿಯೊಂದು ವಿದ್ಯಾರ್ಥಿನಿಲಯಗಳಲ್ಲಿ ಗ್ರಂಥಾಲಯ ತೆರೆಯಲು ತೀರ್ಮಾನಕ್ಕೆ ಬರಲಾಯಿತು. ಜೊತೆಗೆ ಬೆಂಕಿಗಾಹುತಿಯಾದ  ಸಯ್ಯದ್ ಇಸಾಕ್ ಅವರ ಗ್ರಂಥಾಲಯ ನಿರ್ಮಾಣಕ್ಕೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ  ಅಧಿಕಾರಿಗಳಿಗೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಸೂಚನೆ ನೀಡಿದರು.

Key words:  Syed Isak- library- mysore city corporation- commissioner – Shilpa Nag-meeting