ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ: ಮತ್ತಿಬ್ಬರು ಎನ್ ಸಿಬಿ ಬಲೆಗೆ

ಬೆಂಗಳೂರು, ಫೆ.05, 2021 (www.justkannada.in): ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧಿಸಿದಂತೆ ಎನ್ ಸಿಬಿ ಮತ್ತಿಬ್ಬರನ್ನು ಬಂಧಿಸಿದೆ.

ಸೆಲೆಬ್ರಿಟಿ ಮ್ಯಾನೇಜರ್ ರಾಹಿಲಾ ಮತ್ತು ಉದ್ಯಮಿ ಕರಣ್ ಸಜ್ನಾನಿ ಅವರನ್ನು ಬಂಧಿಸಲಾಗಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ತಿಳಿಸಿದೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಸಜ್ನಾನಿ ಮತ್ತು ರಾಹಿಲಾ ಇಬ್ಬರನ್ನೂ ಗುರುವಾರ ಎನ್‌ಸಿಬಿ ಕಚೇರಿಗೆ ಕರೆತರಲಾಯಿತು.

ಈ ಇಬ್ಬರು ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಎನ್‌ಸಿಬಿ ಮೊದಲೇ ದೃಢಪಡಿಸಿತ್ತು.