ಡಿ ಬಾಸ್ ‘ರಾಬರ್ಟ್’ ತೆಲುಗು ವಿತರಣೆ ಹಕ್ಕು ದಾಖಲೆ ಮೊತ್ತಕ್ಕೆ ಸೇಲ್ !

ಬೆಂಗಳೂರು, ಫೆ.05, 2021 (www.justkannada.in)ದಾಖಲೆಯ ಮೊತ್ತಕ್ಕೆ ಡಿ ಬಾಸ್ ದರ್ಶನ್ ಅಭಿನಯದ ‘ರಾಬರ್ಟ್’ ವಿತರಣೆ ಹಕ್ಕು ಮಾರಾಟವಾಗಿದೆ.

‘ರಾಬರ್ಟ್’ ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗಿನಲ್ಲಿಯೂ ತೆರೆಕಾಣಲಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ‘ರಾಬರ್ಟ್’ ಚಿತ್ರದ ವಿತರಣೆ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿವೆ.

ವೆಂಕಟೇಶ್ವರ ಮೂವೀಸ್ ಸಂಸ್ಥೆಯು ‘ರಾಬರ್ಟ್’ ವಿತರಣೆ ಹಕ್ಕು ಪಡೆದುಕೊಂಡಿದೆ. 400 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ರಾಬರ್ಟ್’ ತೆಲುಗು ಅವತರಣಿಕೆ ಬಿಡುಗಡೆ ಮಾಡಲಿದೆ.

‘ರಾಬರ್ಟ್’ ತೆಲುಗು ಚಿತ್ರದ ಟೀಸರ್ ಬುಧವಾರ ಬಿಡುಗಡೆಯಾಗಿದ್ದು, ಸಾಕಷ್ಟು ಗಮನ ಸೆಳೆದಿದೆ.