“ಗುಬ್ಬಚ್ಚಿಗಳ ಉಳಿವಿಗಾಗಿ ಮನೆಯನ್ನು ನಂದನವಾಗಿಸಿದವರು ಇವರು”

ರಾಮನಗರ,ಮಾರ್ಚ್,20,2021(www.justkannada.in) :  ಇಂದು ವಿಶ್ವ ಗುಬ್ಬಚ್ಚಿ ಸಂರಕ್ಷಣಾ ದಿನ. ಇಲ್ಲೊಬ್ಬರು ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳ ಉಳಿವಿಗೆ ಶತ ಪ್ರಯತ್ನ ನಡೆಸುತ್ತಿದ್ದಾರೆ. ಹೌದು, ಜನಸಾಮನ್ಯರಿಗೆ ನಾವೇನು ಮಾಡಬಹುದು ಎಂಬುದಕ್ಕೆ ರಾಮನಗರ ಜಿಲ್ಲೆ ಕನಕಪುರ ಮರಸಪ್ಪರವಿ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.jkಪ್ರತಿನಿತ್ಯ ಪಕ್ಷಿಗಳಿಗೆ ಧಾನ್ಯ, ಕಾಳುಗಳನ್ನು ಹಾಕಿ ನೀರನ್ನು ಒದಗಿಸಿ ಪೋಷಿಸುತ್ತಿದ್ದಾರೆ. ತಮ್ಮ ಪುಟ್ಟ ಮನೆಯ ಮುಂಭಾಗ ಬೊಂಬಿನಲ್ಲಿ ರಂದ್ರಗಳನ್ನು ಕೊರೆದು ಗುಬ್ಬಚ್ಚಿಗಳು ನೆಲೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮನೆಯ ಸುತ್ತಲಿನ ಅಲ್ಪ ಸ್ಥಳವನ್ನೆ ನಂದನವನ್ನಾಗಿಸಿಕೊಂಡು ಹತ್ತಾರು ಬಗೆಯ ಗಿಡಮರಗಳನ್ನ ಹೂವಿನ ಗಿಡಗಳನ್ನು ಬೆಳೆಸುತ್ತಿದ್ದಾರೆ.

ಸೀಬೆ, ದಾಳಿಂಬೆ, ಅಂಜೂರ, ಸಪೋಟ, ಬೆಣ್ಣೆ ಹಣ್ಣು ಮೊದಲಾದ ಗಿಡಗಳು ಪಕ್ಷಿಗಳಿಗೆ ಆಹಾರವನ್ನು ಒದಗಿಸಿದ್ದಾರೆ. ಗುಬ್ಬಿ, ಗುಬ್ಬಚ್ಚಿ, ಕಾಜಾಣ, ಕೋಗಿಲೆ, ಗಿಣಿ ಹಾಗೂ ಅಪರೂಪದ ಸನ್ ಬರ್ಡ್ ಹಕ್ಕಿ ನಂತಹ ಪಕ್ಷಿಗಳು ಇವರ ಕಿರು ಉದ್ಯಾನದ ನಿತ್ಯ ಅತಿಥಿಗಳಾಗಿವೆ.

ಪರಿಸರ ಸಂರಕ್ಷಣೆ ಬಗೆಗೂ ಅಪಾರ ಆಸಕ್ತಿ ಹೊಂದಿರುವ ಮರಸಪ್ಪ ರವಿ ಅವರು ಪ್ರತಿ ವರ್ಷ ಹತ್ತಾರು ಶಾಲೆಗಳಿಗೆ ಹಾಗೂ ಹಳ್ಳಿಹಳ್ಳಿಗೆ ಸಸಿಗಳನ್ನು ವಿತರಿಸಿ ಗಿಡಗಳನ್ನು ಬೆಳೆಸಲು ಉತ್ತೇಜನ ನೀಡುತ್ತಿದ್ದಾರೆ.survival-sparrows-Set up-house-Beautifullಇದಲ್ಲದೆ ಕನಕಪುರ ಸ್ಥಳೀಯ ಲಯನ್ಸ್ ಸಂಸ್ಥೆಯ ಪರಿಸರ ಸಮಿತಿ ಅಧ್ಯಕ್ಷರಾಗಿ ದಶಕಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಹಳ್ಳಿಗೊಂದು ಜಗತಿಕಟ್ಟೆ ದೃಷ್ಟಿಕೋನದಲ್ಲಿ ಹತ್ತಾರು ಹಳ್ಳಿಯಲ್ಲಿ ಜಗತಿಕಟ್ಟೆ ನಿರ್ಮಿಸಿದ್ದಾರೆ.

ಪರಿಸರ ಕಾಳಜಿ ಬಗ್ಗೆ ಕೇವಲ ಮಾತಿನಲ್ಲದೆ ನಡೆ ನುಡಿ ಆಚರಣೆಯಲ್ಲಿ‌ ರೂಢಿಸಿಕೊಂಡಿದ್ದಾರೆ. ಸೀಮಿತ ಅವಕಾಶದಲ್ಲಿ ಪರಿಸರ ಪ್ರೇಮ ಮೆರೆದಿರುವುದು ಹಾಗೂ ಗುಬ್ಬಚ್ಚಿಗಳ ಆಶ್ರಯತಾಣ ಕಲ್ಪಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

key words : survival-sparrows-Set up-house-Beautifull