Saturday, August 22, 2026

BDA Apartments

Home Front Page ಇಂದು ಹಿಜಾಬ್ ಕುರಿತು ಸುಪ್ರೀಂಕೋರ್ಟ್  ತೀರ್ಪು.

ಇಂದು ಹಿಜಾಬ್ ಕುರಿತು ಸುಪ್ರೀಂಕೋರ್ಟ್  ತೀರ್ಪು.

ನವದೆಹಲಿ,ಅಕ್ಟೋಬರ್,13,2022(www.justkannada.in):  ಹಿಜಾಬ್ ಕುರಿತು ಇಂದು  ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು ನೀಡಲಿದೆ.

ಬೆಳಗ್ಗೆ 10.30ರ ಸುಮಾರಿಗೆ ಸುಪ್ರೀಂ ಕೋರ್ಟ್​ನಿಂದ ತೀರ್ಪು ಹೊರಬೀಳಲಿದೆ. ಸರ್ಕಾರ ಶಾಲಾ-ಕಾಲೇಜಿನಲ್ಲಿ ಹಿಜಾನ್​ ಬ್ಯಾನ್ ಮಾಡಿದ್ದು, ಸರ್ಕಾರದ ಆದೇಶವನ್ನ ಹೈಕೋರ್ಟ್ ಎತ್ತಿಹಿಡಿದಿತ್ತು.ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ವಿದ್ಯಾರ್ಥಿನೀಯರು ಅರ್ಜಿ  ಸಲ್ಲಿಸಿದ್ದರು.

ಸಮವಸ್ತ್ರಜತೆ ಹಿಜಾಬ್ ಗೆ ವಿದ್ಯಾರ್ಥಿನಿಯರು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು.  ಸರ್ಕಾರದ ಸಮವಸ್ತ್ರ ನೀತಿ ಎತ್ತಿಹಿಡಿದಿದ್ದ ಹೈಕೋರ್ಟ್, ಹಿಜಾಬ್ ಮುಸ್ಲೀಂ ಧರ್ಮದ ಅತ್ಯಗತ್ಯ ಭಾಗವಲ್ಲ  ಎಂದಿತ್ತು.  

ಇಂದು ಹಿಜಾಬ್ ಬಗ್ಗೆ ನ್ಯಾ ಹೇಮಂತ್ ಗುಪ್ತಾ ನ್ಯಾ ಸುಧಾಂಶು ದುಲಿಯಾ ಪೀಠದಿಂದ ತೀರ್ಪು ಪ್ರಕಟವಾಗಲಿದೆ.

Key words: Supreme Court -verdict – hijab- today.