Sunday, August 23, 2026

BDA Apartments

Home Front Page ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ತೀರ್ಪು ಗಾಯದ ಮೇಲೆ ಬರೆ ಎಳೆದಂತೆ- ಮಾಜಿ ಸಚಿವ ಸಿ.ಟಿ...

ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ತೀರ್ಪು ಗಾಯದ ಮೇಲೆ ಬರೆ ಎಳೆದಂತೆ- ಮಾಜಿ ಸಚಿವ ಸಿ.ಟಿ ರವಿ.

ಬೆಂಗಳೂರು,ಸೆಪ್ಟಂಬರ್,21,2023(www.justkannada.in):  ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆಯೇ  ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಮಾಜಿ ಸಚಿವ ಸಿ.ಟಿ ರವಿ ಬೇಸರ ಹೊರಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಶಾಸಕ ಸಿ.ಟಿ ರವಿ , ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಗಾಯದ ಮೇಲೆ ಬರೆ ಎಳೆದಂತೆ. ಕಾವೇರಿ ನದಿ ನೀರು ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ ರಾಜ್ಯ ಸರ್ಕಾರದ ತಪ್ಪು ಎತ್ತಿ ಹೇಳಲೇಬೇಕಿದೆ ಎಂದಿದ್ದಾರೆ.

ನಮ್ಮ ನೆರವಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಬರಲಿಲ್ಲ.  ಕೇಳುವ ಮೊದಲೇ ಕಾಂಗ್ರೆಸ್ ಸರ್ಕಾರ  ತಮಿಳುನಾಡಿಗೆ ನೀರು ಬಿಟ್ಟಿದೆ. ಯಾರ ಭಯಕ್ಕೆ ಬಿಟ್ಟರು ಅಂತಾ ಗೊತ್ತಾಗುತ್ತಿಲ್ಲ ಡಿಎಂಕೆ ನಿಮಗೆ ಬೆದರಿಕೆ ಹಾಕಿರಬಹುದು. ನೀರು ಬಿಟ್ಟ ಮೇಲೆ ಸಂಸದರ ಸಭೆ ಮಾಡಿದ್ರಿ.  ನೀರು ಬಿಟ್ಟ ಮೇಲೆ ವಾದ ಶುರು ಮಾಡಿದ್ರಿ ಎಂದು ಸಿ.ಟಿ ರವಿ ವಾಗ್ದಾಳಿ ನಡೆಸಿದರು.

Key words: Supreme Court- decision – water – Tamil Nadu – former minister -CT Ravi