370 ಆರ್ಟಿಕಲ್ ರದ್ದತಿ ಬಗ್ಗೆ ಇಂದು ಸುಪ್ರೀಂಕೋರ್ಟ್ ನಿಂದ ತೀರ್ಪು

ನವದೆಹಲಿ,ಡಿಸೆಂಬರ್,11,2023(www.justkannada.in):ಇಂದು ಆರ್ಟಿಕಲ್ 370 ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಪೀಠವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ 2019 ರ ರಾಷ್ಟ್ರಪತಿ ಆದೇಶಗಳ ಸಿಂಧುತ್ವವನ್ನು ನಿರ್ಧರಿಸಲಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು 16 ದಿನಗಳ ವಿಚಾರಣೆಯ ನಂತರ ಸೆಪ್ಟೆಂಬರ್ 5 ರಂದು ಪ್ರಕರಣದ ತೀರ್ಪನ್ನು ಕಾಯ್ದಿರಿಸಿತು. ಇಂದಿಗೆ ಕಾಯ್ದಿರಿಸಿರುವ  ತೀರ್ಪು ಇಂದು ಪ್ರಕಟವಾಗಲಿದೆ.

ಇನ್ನು ಇಂದು ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆ ಜಮ್ಮು ಕಾಶ್ಮೀರ ಮಾಜಿ ಸಿಎಂ   ಮೆಹಬೂಬ ಮುಫ್ತಿಗೆ ಬೆಳಿಗ್ಗೆಯಿಂದ ಗೃಹ ಬಂಧನಕ್ಕಿರಿಸಲಾಗಿದೆ.

Key words:  Supreme Court- decision -today – repeal – Article 370