ಸಿಎಂ ಸಿದ್ದರಾಮಯ್ಯ ಪತ್ನಿಗೆ ಬಿಗ್ ರಿಲೀಫ್: ED ಅರ್ಜಿ ವಜಾಗೊಳಿಸಿ ಕೇಂದ್ರಕ್ಕೆ ತರಾಟೆ ತೆಗೆದುಕೊಂಡ ಸುಪ್ರೀಂ

ನವದೆಹಲಿ,ಜುಲೈ,21,2025 (www.justkannadda.in): ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಗೆ ನೀಡಿದ್ದ ನೋಟಿಸ್ ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನ  ಸುಪ್ರೀಂ ಕೋರ್ಟ್  ವಜಾಗೊಳಿಸಿದೆ.

ಇಡಿ ಸಲ್ಲಿಸಿದ್ದ ಅರ್ಜಿಯನ್ನ ವಜಾಗೊಳಿಸಿ ಕೇಂದ್ರ ಸರ್ಕಾರ ಮತ್ತು ಇಡಿಯನ್ನ ತರಾಟೆ ತೆಗೆದುಕೊಂಡ  ಸುಪ್ರೀಂ ಕೋರ್ಟ್ ಸಿಜೆಐ ಬಿ.ಆರ್ ಗವಾಯಿ, ಇಡಿಯನ್ನ ರಾಜಕೀಯ ಹೋರಾಟಕ್ಕೆ ಬಳಸಿಕೊಳ್ಳಬೇಡಿ ರಾಜಕೀಯ ಹೋರಾಟ ಚುನಾವಣಾ ಕಣದಲ್ಲಿರಲ್ಲಿ ಎಂದು ಅಸಮಾಧಾನ ವ್ಯಕ್ತಪಡಿಸಿತು.

ದಯವಿಟ್ಟು ನನನ್ನ ಬಾಯಿಯನ್ನು ತೆರೆಯುವಂತೆ ಮಾಡಬೇಡಿ. ಬಾಯಿ ತೆರೆದರೆ ಕಠಿಣ ಟೀಕೆಗಳನ್ನ ನೀವು ಎದುರಿಸಬೇಕಾಗುತ್ತೆ. ದುರಾದೃಷ್ಟವಶಾತ್ ನನಗೂ ಮಹಾರಾಷ್ಟ್ರದಲ್ಲಿ ಅನುಭವವಿದೆ. ಇದೇ ರೀತಿ ಅನ್ಯಾಯವನ್ನ ಮುಂದುವರೆಸುವಂತಿಲ್ಲ ಮತದಾರರ ಮುಂದೆ ರಾಜಕೀಯ ಹೋರಾಟ ನಡೆಯಲಿ ರಾಜಕೀಯ ಹೋರಾಟಕ್ಕೆ ಏಕೆ ಇಡಿ ಬಳಸಿಕೊಂಡಿದ್ದೀರಿ ಎಂದು ಸಿಜೆಐ ಬಿಆರ್ ಗವಾಯಿ ಗರಂ ಆದರು.vtu

Key words: Muda case, CM Siddaramaiah, wife,  Supreme Court, ED, petition