ಬ್ಯೂಟಿ ರಹಸ್ಯ ರಿವೀಲ್ ಮಾಡಿದ ಸನ್ನಿ ಲಿಯೋನ್

ಬೆಂಗಳೂರು, ಏಪ್ರಿಲ್ 30, 2021 (www.justkannada.in): ನಟಿ ಸನ್ನಿ ಲಿಯೋನ್ ತನ್ನ ಬ್ಯೂಟಿ ರಹಸ್ಯವನ್ನು ರಿವೀಲ್ ಮಾಡಿದ್ದಾರೆ.

ತಮ್ಮ ಸ್ಕೀನ್ ಹೈಡ್ರೇಟ್ ಮಾಡಲು ಸನ್ನಿ ದಿನಕ್ಕೆ ಕಡಿಮೆ ಎಂದರೆ 8 ಗ್ಲಾಸ್ ನೀರು ಕುಡಿಯುತ್ತಾರೆ. ನೀರನ್ನು ಹೊರತು ಪಡಿಸಿ ಹಣ್ಣು ಹಾಗೂ ಸಲಾಡ್ ಸೇವಿಸುವುದಾಗಿ ಸನ್ನಿ ಹೇಳಿಕೊಂಡಿದ್ದಾರೆ.

ಪ್ರತಿನಿತ್ಯ ಯೋಗ ಅಭ್ಯಾಸ ಮಾಡುತ್ತಾರೆ. ಎಲ್ಲಿಯೇ ಶೂಟಿಂಗ್ ಇತ್ಯಾದಿ ಕೆಲಸಕ್ಕೆ ಹೊರಗಡೆ ಹೋದರೂ ಯೋಗಾಭ್ಯಾಸ ಮಾತ್ರ ತಪ್ಪಿಸಲ್ಲ ಎಂದು ತಿಳಿಸಿದ್ದಾರೆ.

ತ್ವಚೆಯನ್ನು ಕಾಪಾಡಿಕೊಳ್ಳಲು ಸನ್ನಿ ಉತ್ತಮ ಕ್ವಾಲಿಟಿಯ ಪ್ರಾಡಕ್ಟ್ ಉಪಯೋಗಿಸುವುದಾಗಿ ಹೇಳಿದ್ದು, ಮಲಗುವಾಗ ಮೇಕಪ್ ತೆಗೆಯಲು ಮರೆಯಬೇಡಿ ಎಂದಿದ್ದಾರೆ.