ಕಿಚ್ಚನ ಆರೋಗ್ಯದಲ್ಲಿ ಚೇತರಿಕೆ: ವಾರಾಂತ್ಯದಲ್ಲಿ ಬಿಗ್’ಬಾಸ್ ನಲ್ಲಿ ಭಾಗಿ

ಬೆಂಗಳೂರು, ಏಪ್ರಿಲ್ 30, 2021 (www.justkannada.in): ಅನಾರೋಗ್ಯಕ್ಕೀಡಾಗಿದ್ದ ಕಿಚ್ಚ ಸುದೀಪ್ ಆರೋಗ್ಯದಲ್ಲಿ ಸುಧಾರಣೆಯಾಗಿದೆ.

ಈ ವಿಷಯವನ್ನು ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತಮಗಾಗಿ ಪ್ರಾರ್ಥಿಸಿದ ಅಭಿಮಾನಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರಿಗೂ ಕಿಚ್ಚ ಧನ್ಯವಾದ ಸಲ್ಲಿಸಿದ್ದಾರೆ.

ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು. ನಾನೀಗ ಗುಣಮುಖನಾಗುತ್ತಿದ್ದು, ಈ ವಾರ ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳುವುದನ್ನು ಎದಿರುನೋಡುತ್ತಿದ್ದೇನೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.