Wednesday, September 30, 2026

BDA Apartments

ಸುಮಲತಾ ಅಂಬರೀಶ್ ಗೆಲುವಿನ ಬೆನ್ನಲ್ಲೆ ಶುರುವಾಯ್ತು ಕಾರ್ಯಕರ್ತರ ವಾರ್ BDA JK_Adv ...
Home Crime ಸುಮಲತಾ ಅಂಬರೀಶ್ ಗೆಲುವಿನ ಬೆನ್ನಲ್ಲೆ ಶುರುವಾಯ್ತು ಕಾರ್ಯಕರ್ತರ ವಾರ್..

ಸುಮಲತಾ ಅಂಬರೀಶ್ ಗೆಲುವಿನ ಬೆನ್ನಲ್ಲೆ ಶುರುವಾಯ್ತು ಕಾರ್ಯಕರ್ತರ ವಾರ್..

ಮಂಡ್ಯ,ಮೇ,24,2019(www.justkannada.in): ರಾಜ್ಯದಲ್ಲೇ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ  ಸುಮಲತಾ ಅಂಬರೀಶ್ ಗೆದ್ದ ಬೆನ್ನಲ್ಲೇ ಕಾರ್ಯಕರ್ತರ ನಡುವೆ ಗಲಾಟೆ ಶುರುವಾಗಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಳೆಗೆರೆ ಗೇಟ್ ಬಳಿ ಜೆಡಿಎಸ್ ಕಾರ್ಯಕರ್ತರು ಮತ್ತು ಸುಮಲತಾ ಅವರ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು, ಸುಮಲತಾ ಬೆಂಬಲಿಗರಾದ ಶಶಿಧರ್ ಮತ್ತು ಕುಮಾರ್ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸುಮಲತಾ ಅಂಬರೀಶ್ ಅವರ ಗೆಲವಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಗಲಾಟೆ ನಡೆದಿದ್ದು, ಜೆಡಿಎಸ್ ಕಾರ್ಯಕರ್ತರಾದ ಕುಲ್ ದೀಪ್, ಅಭಿಷೇಕ್, ಪ್ರಮೋದ್, ವರುಣ ಎಂಬುವವರು ಹಲ್ಲೆ ನಡೆಸಿದ್ದಾರೆ. ಶಶಿಧರ್ ಮತ್ತು ಕುಮಾರ್ ಮೇಲೆ ಚಾಕು ಮತ್ತು ಬಿಯರ್ ಬಾಟಲಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು ಸದ್ಯ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

key words: #sumalathaambarish #won #war #activitist