Tuesday, August 25, 2026

BDA Apartments

Home Front Page ದೇವೇಗೌಡರನ್ನು ಭೇಟಿಯಾಗಿ ಕಣ್ಣೀರಿಟ್ಟ ಭವಾನಿ ರೇವಣ್ಣ

ದೇವೇಗೌಡರನ್ನು ಭೇಟಿಯಾಗಿ ಕಣ್ಣೀರಿಟ್ಟ ಭವಾನಿ ರೇವಣ್ಣ

ಬೆಂಗಳೂರು:ಮೇ-24:(www.justkannada.in) ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರನ್ನು ಭೇಟಿಯಾದ ಸಂಸದ ಪ್ರಜ್ವಲ್ ತಾಯಿ, ಭವಾನಿ ರೇವಣ್ಣ, ಭೇಟಿಯಾಗುತ್ತಲೇ ಕಣ್ಣೀರು ಹಾಕಿದ್ದಾರೆ. ನಿಮ್ಮ ಸೋಲಿಗೆ ನಾವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ದೇವೇಗೌಡರನ್ನು ಭೇಟಿಯಾದ ಭಾವಾನಿ ರೇವಣ್ಣ, ಕಣೀರುಡುತ್ತಲೇ ಗೌಡರನ್ನು ಮಾತನಾಡಿಸಿದರು. ನಮ್ಮಿಂದಾಗಿಯೇ ನಿಮಗೆ ಈ ಸೋಲಾಯ್ತು. ನಮ್ಮನ್ನು ಕ್ಷಮಿಸಿಬಿಡಿ ಎಂದು ಭಾವುಕರಾದರು.

ಹಾಸನದಲ್ಲಿ ನೀವು ಗೆಲ್ಲಬೇಕು. ಪ್ರಜ್ವಲ್ ರೇವಣ್ಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ನೀವೇ ಹಾಸನದಿಂದ ಸ್ಪರ್ಧಿಸಿ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಇದಕ್ಕೆಲ್ಲ ದೃತಿಗೆಡಬಾರದು ಎಂದು ಸಮಾಧಾನ ಮಾಡಿದ್ದಾರೆ.

ಇನ್ನು ದೇವೇಗೌಡರ ಭೇಟಿಗೂ ಮುನ್ನ ಮಾತನಾಡಿದ ಭವಾನಿ ರೇವಣ್ಣ, ಮಾಜಿ ಪ್ರಧಾನಿ ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಸೋಲನ್ನು ಕಂಡಿದ್ದಾರೆ. ಇದರಿಂದ ಮನಸ್ಸಿಗೆ ನೋವಾಗಿದೆ. ಕಾರ್ಯಕರ್ತರಿಗೂ ಬೇಸರವಾಗಿದೆ. ಹೀಗಾಗಿ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವನ್ನು ಸಂಭ್ರಮಾಚರಣೆ ಮಾಡಿಲ್ಲ. ಕಳೆದ ನಾಲ್ಕೈದು ದಿನಗಳಿಂದ ಗೆಲುವನ್ನು ಸಂಭ್ರಮಿಸಲು ಪ್ರಜ್ವಲ್ ಹಾಗೂ ಕಾರ್ಯಕರ್ತರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ತುಮಕೂರಿನಲ್ಲಿ ಆದ ಸೋಲಿನಿಂದ ಎಲ್ಲರಿಗೂ ನೋವಾಗಿದೆ. ನಾವು ಯಾರೂ ಕೂಡ ಗೆಲುವನ್ನು ಆಚರಿಸಿಲ್ಲ ಎಂದರು.

ದೇವೇಗೌಡರನ್ನು ಭೇಟಿಯಾಗಿ ಕಣ್ಣೀರಿಟ್ಟ ಭವಾನಿ ರೇವಣ್ಣ
Hasana,Bhavani revanna,meet,H D Devegowda