Friday, September 25, 2026

BDA Apartments

ಸುಮಲತಾ ಗೆಲುವಿನ ಸೂಚನೆ ನೀಡಿದ ಹೊನ್ನಾದೇವಿ ಹೂವಿನ ಪ್ರಸಾದ ! BDA JK_Adv BDA Adv
Home Cinema ಸುಮಲತಾ ಗೆಲುವಿನ ಸೂಚನೆ ನೀಡಿದ ಹೊನ್ನಾದೇವಿ ಹೂವಿನ ಪ್ರಸಾದ !

ಸುಮಲತಾ ಗೆಲುವಿನ ಸೂಚನೆ ನೀಡಿದ ಹೊನ್ನಾದೇವಿ ಹೂವಿನ ಪ್ರಸಾದ !

ಮಂಡ್ಯ, ಮೇ 14, 2019 (www.justkannada.in): ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗಿರುವ ದೇವರ ಹೂ ಭವಿಷ್ಯದ ವಿಡಿಯೋ ವೈರಲ್ ಆಗಿದೆ.

ರಾಜ್ಯದ ಹೈವೋಲ್ಟೆಜ್ ಕಣವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಫಲಿತಾಂಶದ ಬಗ್ಗೆ ಭಾರಿ ಕುತೂಹಲ ಮೂಡಿದೆ. ಸಮೀಕ್ಷೆ, ವರದಿಗಳು ಭವಿಷ್ಯಗಳ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಹೊನ್ನಾದೇವಿ ಹೂವಿನ ಪ್ರಸಾದದ ಮೂಲಕ ಸುಮಲತಾ ಗೆಲುವಿನ ಬಗ್ಗೆ ಭವಿಷ್ಯ ಹೇಳಲಾಗಿದೆ.

ಸುಮಲತಾ ಗೆಲ್ಲುವುದಾದರೆ ಬಲಕ್ಕೆ ಹೂವು ಕೊಡಮ್ಮ ಎಂದು ದೇವಾಲಯದ ಅರ್ಚಕರು ಮನವಿ ಮಾಡಿದ್ದು, ದೇವರ ಮೂರ್ತಿಯ ಬಲ ಭಾಗದಿಂದ ಹೂ ಬಿದ್ದು, ಗೆಲುವಿನ ಸೂಚನೆ ನೀಡಿದೆ.

ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರ್ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಿವೆ.