Monday, September 21, 2026

BDA Apartments

ಹೊಸ ಮನೆಗೆ ಗೃಹ ಪ್ರವೇಶ ನೆರವೇರಿಸಿದ ಸುಮಲತಾ ಅಂಬರೀಶ್, ಅಭಿಷೇಕ್ BDA JK_Adv BDA Adv
Home Cinema ಹೊಸ ಮನೆಗೆ ಗೃಹ ಪ್ರವೇಶ ನೆರವೇರಿಸಿದ ಸುಮಲತಾ ಅಂಬರೀಶ್, ಅಭಿಷೇಕ್

ಹೊಸ ಮನೆಗೆ ಗೃಹ ಪ್ರವೇಶ ನೆರವೇರಿಸಿದ ಸುಮಲತಾ ಅಂಬರೀಶ್, ಅಭಿಷೇಕ್

ಬೆಂಗಳೂರು, ಮೇ, 18, 2019 (www.justkannada.in): ನಟ ಅಂಬರೀಶ್ ಅವರ ಕನಸಿನ ಮನೆಯ ಗೃಹ ಪ್ರವೇಶವನ್ನು ಪತ್ನಿ ಸುಮಲತಾ ಅಂಬರೀಶ್ ಮತ್ತು ಪುತ್ರ ಅಭಿಷೇಕ್ ಇಂದು ಸರಳವಾಗಿ ನೇರವೇರಿಸಿದರು.

ಗೃಹ ಪ್ರವೇಶವನ್ನು ಸರಳವಾಗಿ ಮಾಡಿದ್ದು, ಆಪ್ತರು, ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಬೆಂಗಳೂರಿನ ಜೆಪಿ ನಗರದಲ್ಲಿರುವ ರೆಬೆಲ್ ಸ್ಟಾರ್ ಅಂಬರೀಶ್ ನಿವಾಸಕ್ಕೆ ಗೃಹ ಪ್ರವೇಶ ಮಾಡಿ ಸುಮಲತಾ ಮತ್ತು ಅಭಿಷೇಕ್ ಹೋಗಿದ್ದಾರೆ.

ಅಂಬರೀಶ್ ಬದುಕಿದ್ದ ವೇಳೆಯಲ್ಲಿ ಈ ಮನೆಯನ್ನ ಕೆಡವಿ ತಮ್ಮ ಮಗನಿಗೆ ಇಷ್ಟವಾಗುವ ರೀತಿಯಲ್ಲಿ ನವೀಕರಣ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು. ಶುಕ್ರವಾರ ಒಳ್ಳೆಯ ದಿನ ಎಂಬ ಕಾರಣಕ್ಕೆ ಪೂಜೆ ಸಲ್ಲಿಸಿ ಹೊಸಮನೆಗೆ ಹೋಗಿದ್ದಾರೆ ಎನ್ನಲಾಗಿದೆ.