Tuesday, August 4, 2026

BDA Apartments

Home Crime ಇಬ್ಬರು ಮಕ್ಕಳ ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ

ಇಬ್ಬರು ಮಕ್ಕಳ ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ

ಮೈಸೂರು,ನವೆಂಬರ್,1,2025 (www.justkannada.in):  ಇಬ್ಬರು ಮಕ್ಕಳ ಕತ್ತು ಕೊಯ್ದು ಬಳಿಕ ತಾನೂ ಕತ್ತು ಕೊಯ್ದುಗೊಂಡು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದ ಮುಸ್ಲಿಂ ಬ್ಲಾಕ್  ಘಟನೆ ನಡೆದಿದೆ. ತಾಯಿ ಸಂಬ್ರನ ಎಂಬ ಮಹಿಳೆಯೇ ತನ್ನಿಬ್ಬರ ಮಕ್ಕಳನ್ನ ಕೊಲೆಗೈದ ತಾನೂ ಆತ್ಮಹತ್ಯೆಗೆ ಶರಣಾಗಿರುವುದು.  ಒಂದು ಮಗು ಹತ್ತು ದಿನದ ಮಗು ಎನ್ನಲಾಗಿದೆ.

ಮಹಿಳೆಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬೆಟ್ಟದಪುರ  ಠಾಣಾ  ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಾಗಿದೆ.

Key words: Woman, suicide, murder, two children, Mysore