Wednesday, November 4, 2026

Dasara Wishes

Happy Dasara
Home Crime ಸಾಮಾಜಿಕ ಬಹಿಷ್ಕಾರ, ಮಾನಕ್ಕೆ ಅಂಜಿ ಗ್ರಾ. ಪಂ ಸದಸ್ಯ ಆತ್ಮಹತ್ಯೆ

ಸಾಮಾಜಿಕ ಬಹಿಷ್ಕಾರ, ಮಾನಕ್ಕೆ ಅಂಜಿ ಗ್ರಾ. ಪಂ ಸದಸ್ಯ ಆತ್ಮಹತ್ಯೆ

ಮೈಸೂರು,ಆಗಸ್ಟ್,2,2025 (www.justkannada.in): ಸಾಮಾಜಿಕ ಬಹಿಷ್ಕಾರ ಮತ್ತು ಮಾನಕ್ಕೆ ಅಂಜಿ ಗ್ರಾಮ ಪಂಚಾಯತಿ  ಸದಸ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಹುಂಡಿಯಲ್ಲಿ ಈ ಘಟನೆ ನಡೆದಿದೆ. 60 ವರ್ಷದ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡ ಗ್ರಾಮ ಪಂಚಾಯತಿ ಸದಸ್ಯ. ಘಟನೆಗೆ ಸಂಬಂಧಿಸಿದಂತೆ 6 ಜನರ ವಿರುದ್ಧ ದೂರು ದಾಖಲಾಗಿದೆ.

ಜಮೀನು ವಿಚಾರದಲ್ಲಿ ಪಕ್ಕದ ಮನೆಯವರು ಬೆದರಿಕೆ  ಹಾಕಿದ್ದಾರೆ ಎಂಬ ಆರೋಪ,  ಸಮುದಾಯದಿಂದ ಬಹಿಷ್ಕಾರ ಹಿನ್ನಲೆಯಲ್ಲಿ ಮಾನಕ್ಕೆ ಅಂಜಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ನ್ಯಾಯಕ್ಕಾಗಿ ಹೆಂಡತಿ ಅಂಗಲಾಚಿದ್ದು,  ಆಕ್ರಂದನ‌ ಮುಗಿಲು ಮುಟ್ಟಿದೆ.ಸಾಮಾಜಿಕ ಬಹಿಷ್ಕಾರ, ಮಾನಕ್ಕೆ ಅಂಜಿ ಗ್ರಾ. ಪಂ ಸದಸ್ಯ ಆತ್ಮಹತ್ಯೆ su1

ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ  ಡಿವೈಎಸ್‌ಪಿ ರಘು, ಇನ್ಸ್‌ಪೆಕ್ಟರ್‌ ಸುನಿಲ್ ಸೇರಿದಂತೆ ಇತರೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.vtu

Key words: Gram panchayath, member, suicide