ಕಬ್ಬಿನ ಉಪ ಉತ್ಪನ್ನ ಲಾಭಾಂಶ ರೈತರಿಗೆ  ನೀಡಲು ನಿರ್ಧಾರ- ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ.

ಬೆಂಗಳೂರು,ಡಿಸೆಂಬರ್,12,2022(www.justkannada.in): ಕಬ್ಬಿನ ಉಪ ಉತ್ಪನ್ನ ಲಾಭಾಂಶ ರೈತರಿಗೆ  ನೀಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, 202 ಕೋಟಿ ರೂ. ಉಪುತ್ಪನ್ನದ ಲಾಭಾಂಶವನ್ನ ರೈತರಿಗೆ ನೀಡುತ್ತೇವೆ. ಮೊದಲ ಕಂತಿನ 202 ಕೋಟಿ ರೂ ಬಿಡುಗಡೆ ಮಾಡಿದ್ದೇವೆ. ರೈತರಿಗೆ ಬಾಕಿ ಉಳಿಸಿಕೊಳ್ಳದೆ ಪಾವತಿಸಲಾಗಿದೆ. 19,624 ಕೋಟಿ ರೂ ಬಾಕಿಯನ್ನ ಪಾವತಿಸಲಾಗಿದೆ. ಯಾವುದೇ ಒಂದು ರೂಪಾಯಿ ಬಾಕಿ ಉಳಿಸಿಕೊಂಡಿಲ್ಲ ಎಂದರು.

ಬಿಜೆಪಿ ಬಂದ ಬಳಿಕ ಕಾರ್ಖಾನೆಗಳು ಲಾಭದಲ್ಲಿವೆ. ಬಿಎಸ್ ಎಸ್ ಎಸ್ಕೇಲ್ ಬಗ್ಗೆಯೂ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬಿಜೆಪಿ ಹೊಸ ಬದಲಾವಣೆ ತರುವ ಕೆಲಸ ಮಾಡುತ್ತದೆ ಎಂದು ಸಚಿವ ಶಂಕರಪಾಟೀಲ್ ಮುನೇನಕೊಪ್ಪ ತಿಳಿಸಿದರು.

Key words: Sugarcane- by-product -dividend- farmers-  Minister -Shankar Patil Munenakoppa