ರಾಜ್ಯದಲ್ಲಿ ಮಳೆ, ಶೀತಗಾಳಿ: ಮಕ್ಕಳು, ವೃದ್ಧರು ತುಂಬಾ ಎಚ್ಚರಿಕೆಯಿಂದಿರುವಂತೆ ಸಚಿವ ಸುಧಾಕರ್ ಸಲಹೆ.

ಬೆಂಗಳೂರು,ಡಿಸೆಂಬರ್,12,2022(www.justkannada.in):   ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಮ್ಯಾಂಡಾಸ್ ಚಂಡಮಾರುತದಿಂದಾಗಿ ನೆರೆಯ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಇದರ ಎಫೆಕ್ಟ್ ಕರ್ನಾಟಕದ ಮೇಲೂ ತಟ್ಟಿದೆ. ಈ ಹಿನ್ನೆಯಲ್ಲಿ ಮಳೆ, ಶೀತಗಾಳಿ ಹೆಚ್ಚಾಗಿದ್ದು ಮಕ್ಕಳು, ವೃದ್ಧರು ತುಂಬಾ ಎಚ್ಚರಿಕೆಯಿಂದಿರುವಂತೆ  ಆರೋಗ್ಯ ಸಚಿವ ಸುಧಾಕರ್ ಸಲಹೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಚಳಿಗಾಲದ ಜೊತೆ ಚಂಡಮಾರುತದ ಪರಿಣಾಮ ಎದುರಿಸುತ್ತಿದ್ದೇವೆ. ಹೀಗಾಗಿ ಮಕ್ಕಳು, ವೃದ್ಧರು ತುಂಬಾ ಎಚ್ಚರಿಕೆಯಿಂದ ಇರಬೇಕು. ವೃದ್ಧರನ್ನ, ಮಕ್ಕಳನ್ನ ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಉಸಿರಾಟದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಆರೋಗ್ಯ ಇಲಾಖೆಯಿಂದಲೂ ಮಾರ್ಗಸೂಚಿ ಹೊರಡಿಸಿದ್ದೇವೆ. ವೈದ್ಯರಿಗೂ ಎಚ್ಚರಿಕೆ ವಹಿಸಲು ಸಭೆ ಕರೆದು ಸೂಚಿಸುತ್ತೇನೆ ಎಂದು ತಿಳಿಸಿದರು.udupi-corona-green-zone-month-minister-dr-k-sudhakar

ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೂ ಮುಂಜಾಗ್ರತಾ ಕ್ರಮ ವಹಿಸಲು ಈಗಾಗಲೇ ಸೂಚಿಸಿದ್ದೇನೆ. ಆಸ್ಪತ್ರೆಗಳಲ್ಲಿ ಎಲ್ಲಾ ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗಿದೆ. ಈಗ ಸಭೆ ಕರೆದು ವೈದ್ಯರಿಗೂ ಸೂಚನೆ ಕೊಡುತ್ತೇನೆ. ಈ  ವಾತಾವರಣದಿಂದ  ಕೊರೋನಾ ಉಲ್ಬಣವಾಗುವುದಿಲ್ಲ. ಆದರೆ ದೇಹವನ್ನು ತುಂಬಾ ಬೆಚ್ಚಗೆ ಕಾಪಾಡಿಕೊಳ್ಳಬೇಕು.ನಾವೂ ಕೂಡ ತುಂಬಾ ಮುಂಜಾಗ್ರತೆವಹಿಸಿದ್ದೇವೆ ಎಂದರು.

Key words: Rain-cold- wind –state-Minister- Sudhakar -advises

ENGLISH SUMMARY..

Rain, cold wave in State: Health Minister Dr. K. Sudhakar asks children and elderly citizens to be careful
Bengaluru, December 12, 2022 (www.justkannada.in): Health Minister Dr. K. Sudhakar today informed that, “the State is witnessing the effect of the Mandous cyclone due to the depression in the Bay of Bengal. As a result of this we are seeing rain, cold wave. Children and elderly citizens should be very careful.”udupi-corona-green-zone-month-minister-dr-k-sudhakar
We are facing the effect of the cyclone along with winter season. Hence, children and elderly citizens should be careful. I request the families to take care of elderly and children. There are possibilities of increase in breathing problems among many. Hence, we have also issued guidelines through the Health Department. I will also convene a doctors meeting and ask them to take precautionary measures,” he informed.
Keywords: Health Minister/ Dr. K. Sudhakar/ Cyclone/ children/ elderly citizens