ಸಿದ್ಧರಾಮಯ್ಯ ಬಗ್ಗೆ ಸುಧಾಕರ್ ಟ್ವಿಟ್ ಸತ್ಯಕ್ಕೆ ದೂರ:  ಪ್ರಮಾಣ ಮಾಡುವಂತೆ ಸವಾಲೆಸೆದ ಎಂಟಿಬಿ ನಾಗರಾಜ್.

ಬೆಂಗಳೂರು,ಮೇ,17,2023(www.justkannada.in): ಸಮ್ಮಿಶ್ರ ಸರ್ಕಾರದ ಪತನದಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ಸಿದ್ಧರಾಮಯ್ಯನವರ ಪಾತ್ರವಿದೆ ಎಂದಿದ್ದ ಡಾ.ಕೆ.ಸುಧಾಕರ್ ಗೆ ಎಂ.ಟಿಬಿ ನಾಗರಾಜ್ ಸವಾಲೆಸೆದು ಟಾಂಗ್ ನೀಡಿದ್ದಾರೆ.

ಸುಧಾಕರ್ ಟ್ವಿಟ್ ಕುರಿತು ಟ್ವಿಟ್ ಮಾಡಿ ತಿರುಗೇಟು ನೀಡಿರುವ ಎಂಟಿಬಿ ನಾಗರಾಜ್,  ಮಾನ್ಯ ಸಿದ್ದರಾಮಯ್ಯ ರವರನ್ನು ನಾನು ಕೂಡ ಹಲವಾರು ಬಾರಿ ಭೇಟಿ ಮಾಡಿ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದಲ್ಲಿ ಹಾಗೂ ನಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಏನು ಕೆಲಸ ಕಾರ್ಯಗಳು ಆಗುತ್ತಿಲ್ಲವೆಂದು ಹೇಳಿಕೊಂಡಾಗ ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿ ಎಂದು ಹೇಳಿದ್ದರು ಇದು ಸತ್ಯ ಎಂದು ಸುಧಾಕರ್ ಹೇಳಿದ್ದಾರೆ.

ಆದರೆ ಮಾಜಿ ಸಚಿವ ಸುಧಾಕರ್ ರವರು ಇಂದು ಮಾನ್ಯ ಸಿದ್ದರಾಮಯ್ಯ ರವರ ಬಗ್ಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮಾತುಗಳು ಸತ್ಯಕ್ಕೆ ದೂರವಾಗಿದ್ದು, ಸುಧಾಕರ್ ರವರು ಚುನಾವಣೆಯಲ್ಲಿ ಸೋತ ನಂತರ ಭ್ರಮನಿರಸನರಾಗಿ ಈ ಮಾತುಗಳನ್ನು ಹೇಳಿದ್ದಾರೆ. ಹಾಗಾದರೆ, ಇಷ್ಟು ದಿನ ಏಕೆ ಸುಮ್ಮನಿದ್ದರು? ಎಂದು ಎಂಟಿಬಿ ನಾಗರಾಜ್ ಪ್ರಶ್ನಿಸಿದ್ದಾರೆ.

ಬಿಜೆಪಿ ಸೇರಲು ಸಿದ್ದರಾಮಯ್ಯರವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇತ್ತೆಂದು ಸುಧಾಕರ್ ರವರು ತಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಿ ಹೇಳುವರೆ?  ಎಂದು ಸವಾಲು ಹಾಕಿರುವ ಎಂಟಿಬಿ ನಾಗರಾಜ್, ಇಷ್ಟು ದಿನ ಮೌನವಾಗಿದ್ದು?ಈಗ ಇದರ ಪ್ರಸ್ತಾಪದ ಮರ್ಮವಾದರೂ ಏನು? ಸುಧಾಕರ್ ಗೆ ಪ್ರಶ್ನಿಸಿದ್ದಾರೆ.

Key words: Sudhakar- tweet -about –Siddaramaiah-MTB Nagaraj -challenge