Tuesday, August 11, 2026

BDA Apartments

Home Cinema ಕಿಚ್ಚ ಸುದೀಪ್ 2 ಸಾವಿರ ಅಡಿ ಕಟೌಟ್ ರಾರಾಜಿಸಲು ಕೌಂಟ್ ಡೌನ್ !

ಕಿಚ್ಚ ಸುದೀಪ್ 2 ಸಾವಿರ ಅಡಿ ಕಟೌಟ್ ರಾರಾಜಿಸಲು ಕೌಂಟ್ ಡೌನ್ !

ಬೆಂಗಳೂರು, ಜನವರಿ 30, 2020 (www.justkannada.in): ದುಬೈನ ಬುರ್ಜ್ ಖಲೀಫಾದ ಮೇಲೆ ಅತಿ ಎತ್ತರದ 2,000 ಅಡಿ ಕಟೌಟ್ ರಾರಾಜಿಸಲು ಕೌಂಟ್ ಡೌನ್ ಶುರುವಾಗಿದೆ.

ಸುದೀಪ್ ತಮ್ಮ ಸಿನಿ‌ಜರ್ನಿಯ 25ನೇ ವರ್ಷದ ಸಂಭ್ರಮ (ಬೆಳ್ಳಿಹಬ್ಬ) ಆಚರಿಸಿಕೊಳ್ಳುತ್ತಿದ್ದಾರೆ. ಇದರ ಅಂಗವಾಗಿ ಜಗತ್ತಿನ ಅತಿ ಎತ್ತರದ ಕಟ್ಟಡ, ಬುರ್ಜ್ ಖಲೀಫಾದ ಮೇಲೆ ಅತಿ ಎತ್ತರದ ಕಟೌಟ್ ರಾರಾಜಿಸಲಿದೆ.

ಮೂರು ದಿನಗಳ ಹಿಂದೆಯೇ ದುಬೈ ತಲುಪಿರೋ ಸುದೀಪ್ ಹಾಗೂ ಚಿತ್ರತಂಡ, ನಾಳೆ ಬುರ್ಜ್ ಖಲೀಫಾದ‌ಲ್ಲಿ ಕಿಚ್ಚನ ಬೆಳ್ಳಿ ಹಬ್ಬ ಆಚರಣೆ ಮಾಡಲಿದೆ.

ವಿಕ್ರಾಂತ್ ರೋಣ ಚಿತ್ರದ ಕಟೌಟ್ ಬುರ್ಜ್ ಖಲೀಫಾದ ಮೇಲೆ ಅನಾವರಣ ಆಗಲಿದೆ. ಬುರ್ಜ್ ಖಲೀಫಾದ ಮೇಲೆ 180 ಸೆಕೆಂಡುಗಳ ಟೀಸರ್ ರಿಲೀಸ್ ಆಗಲಿದೆ.