ಕಿಚ್ಚ ಸುದೀಪ್ ‘ಫ್ಯಾಂಟಮ್’ ಪ್ಯಾನ್ ಇಂಡಿಯಾ ರಿಲೀಸ್ ?!

ಬೆಂಗಳೂರು, ಡಿಸೆಂಬರ್ 01, 2020 (www.justkannada.in): ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ.

ಅಂದಹಾಗೆ ಫ್ಯಾಂಟಮ್ ಎರಡು ಹಂತದ ಚಿತ್ರೀಕರಣ ಮುಗಿಸಿ ಮೂರನೇ ಹಂತಕ್ಕೆ ಸಿದ್ಧವಾಗಿದೆ. ಈ ನಡುವೆ ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಲು ಬಾಲಿವುಡ್’ನ ಕತ್ರಿನಾ ಕೈಫ್ ಅವರನ್ನು ಕರೆತರುವ ಬಗ್ಗೆ ಸುದ್ದಿ ಬಂದಿತ್ತು.

ಇದಕ್ಕೂ ಮೊದಲು ಸುದೀಪ್ ಅಭಿನಯದ ‘ಪೈಲ್ವಾನ್’ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ರಿಲೀಸ್ ಕಂಡಿತ್ತು. ಒಂದು ವೇಳೆ ಫ್ಯಾಂಟಮ್ ಕೂಡಾ ಬಹುಭಾಷೆಗಳಲ್ಲಿ ಬಿಡುಗಡೆಯಾದರೆ ಇದು ಸುದೀಪ್ ಅಭಿನಯದ ಎರಡನೇ ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ.