Thursday, August 27, 2026

BDA Apartments

Home Cinema ‘ಬಿಗ್ ಬಾಸ್’ ಮನೆಯ ಹರೀಶ್ ರಾಜ್’ಗೆ ದುಬಾರಿ ಗಿಫ್ಟ್ ಕೊಟ್ಟ ಕಿಚ್ಚ

‘ಬಿಗ್ ಬಾಸ್’ ಮನೆಯ ಹರೀಶ್ ರಾಜ್’ಗೆ ದುಬಾರಿ ಗಿಫ್ಟ್ ಕೊಟ್ಟ ಕಿಚ್ಚ

ಬೆಂಗಳೂರು, ಫೆಬ್ರವರಿ 0, 2019 (www.justkannada.in): ನಟ ಹರೀಶ್ ರಾಜ್ ಗೆ ಸುದೀಪ್ ದುಬಾರಿ ಬೆಲೆಯ ವಾಚ್ ನ ಗಿಫ್ಟ್ ಆಗಿ ಕೊಟ್ಟಿದ್ದಾರೆ.

ಹೌದು, ‘ಬಿಗ್ ಬಾಸ್ ಕನ್ನಡ-7’ ಕಾರ್ಯಕ್ರಮದಲ್ಲಿ ವೀಕ್ಷಕರಿಗೆ ಹೆಚ್ಚು ಮನೋರಂಜನೆ ನೀಡಿದವರ ಪೈಕಿ ನಟ ಹರೀಶ್ ರಾಜ್ ಕೂಡ ಒಬ್ಬರು. ಮಿಮಿಕ್ರಿ ಮಾಡುತ್ತ, ಎಲ್ಲರನ್ನು ನಕ್ಕು ನಲಿಸುತ್ತ ಹರೀಶ್ ರಾಜ್ ‘ಬಿಗ್ ಬಾಸ್’ ಮನೆಯಲ್ಲಿ ಕಾಲ ಕಳೆದಿದ್ದರು.

‘ಬಿಗ್ ಬಾಸ್’ ಮನೆಯಲ್ಲಿ ಪ್ರಬಲ ಸ್ಪರ್ಧಿ ಆಗಿದ್ದರೂ, ಫಿನಾಲೆಗೆ ಬೆರಳೆಣಿಕೆಯಷ್ಟು ದಿನಗಳು ಬಾಕಿ ಇದ್ದಾಗ, ಹರೀಶ್ ರಾಜ್ ದೊಡ್ಡ ಮನೆಯಿಂದ ಹೊರಬಂದಿದ್ದರು. ಆದರೆ ಭರಪೂರ ಮನರಂಜನೆ ನೀಡಿದ್ದ ಹರೀಶ್ ರಾಜ್ ಗೆ ಏನಾದರೂ ಕೊಡಬೇಕು ಎಂದುಕೊಂಡಿದ್ದ ಸುದೀಪ್ ದುಬಾರಿ ಬೆಲೆಯ ಉಡುಗೊರೆ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಹರೀಶ್ ರಾಜ್ ಹೇಳಿಕೊಂಡಿದ್ದಾರೆ.