ಏಕಾಏಕಿ ಸಾಕಾನೆ ದಾಳಿ: ಆದಿವಾಸಿ ವ್ಯಕ್ತಿ ಬಲಿ.

ಗುಂಡ್ಲುಪೇಟೆ ,ಡಿಸೆಂಬರ್,16,2023(www.justkannada.in):  ಸಾಕಾನೆ ದಾಳಿಗೆ ಆದಿವಾಸಿ ವ್ಯಕ್ತಿ ಬಲಿಯಾಗಿರುವ ಘಟನೆ ತಮಿಳುನಾಡಿನ ತೆಪ್ಪಕಾಡು ಆನೆ ಶಿಬಿರದಲ್ಲಿ ನಡೆದಿದೆ.

ಇತ್ತೀಚಿಗೆ ರಾಷ್ಟ್ರಪತಿ ದ್ರೌಪದಿಮುರ್ಮು ಅವರು ಮತ್ತು ಪ್ರಧಾನಿ ಮೋದಿ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ್ದರು. ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ತೆಪ್ಪಕಾಡು‌ ಆನೆ ಶಿಬಿರ ಇದಾಗಿದ್ದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿದೆ. ಇದೇ ಶಿಬಿರದಲ್ಲಿ ಈ ಘಟನೆ ನಡೆದಿದೆ.

ವಿಲ್ಸನ್ ಎಂಬ ಸಾಕಾನೆ ಆದಿವಾಸಿ ವ್ಯಕ್ತಿ ಸಿ.ಕೆ ಮಥನ್ ಎಂಬ ವ್ಯಕ್ತಿ ದಾಳಿ ಮಾಡಿದ್ದು ಸಿ.ಕೆ ಮಥನ್ ಸಾವನ್ನಪ್ಪಿದ್ದಾರೆ.  ಆನೆ ಶಿಬಿರದಲ್ಲಿರುವ ಮಾವುತರ ಮನಗೆ ಸಂಬಂಧಿ ಮಥನ್ ಬಂದಿದ್ದರು. ಈ ವೇಳೆ ಏಕಾಏಕಿ ಆನೆ ದಾಳಿ ನಡೆಸಿದೆ.  ಸ್ಥಳಕ್ಕೆ ತಮಿಳುನಾಡಿನ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Sudden – attack-Elephant- Adivasi man-killed